ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಲಸಿಕೆ ಇದೆಯೇ ಅಥವಾ ಇಲ್ಲವೋ ಎಂದು ತಿಳಿಯಲು ಕೇಂದ್ರ ಸರಕಾರದಿಂದ ವಾಟ್ಸಾಪ್ ಸಂಖ್ಯೆ ಜಾರಿ

ನವ ದೆಹಲಿ – ಕೇಂದ್ರ ಆರೋಗ್ಯ ಸಚಿವಾಲಯವು 9013151515 ಈ ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಯ ಸಹಾಯದಿಂದ ನಾಗರಿಕರು ‘ತಮ್ಮ ಪ್ರದೇಶದ ಲಸಿಕೆ ಕೇಂದ್ರದಲ್ಲಿ ಲಸಿಕೆ ಲಭ್ಯವಿದೆಯೇ ಅಥವಾ ಇಲ್ಲ ?’ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈ ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕು. ನಾಗರಿಕರು ವಾಟ್ಸ್‍ಅಪ್‍ನಲ್ಲಿ ತಮ್ಮ ಪ್ರದೇಶದ ಪಿನ್ ಕೋಡ್ ಟೈಪ್ ಮಾಡಿ ಕಳುಹಿಸಬೇಕಾಗುತ್ತದೆ. ಅನಂತರ ಈ ಪ್ರದೇಶದಲ್ಲಿ ಲಸಿಕೆಗಳ ಲಭ್ಯತೆಯ ಬಗ್ಗೆ ಅಧಿಕೃತ ಮಾಹಿತಿಯು ಸಿಗಲಿದೆ.

ಸರಕಾರಿ ಅಧಿಕಾರಿಗಳು ಇದರ ಬಗ್ಗೆ ಮುಂದಿನಂತೆ ಹೇಳಿದರು. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ತುಂಬಾ ತೊಂದರೆಯಾಗುವುದಿಲ್ಲ. ಅದೇರೀತಿ ಅನಾವಶ್ಯಕವಾಗಿ ಪದೇ ಪದೇ ಯಾವುದೇ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ವ್ಯಕ್ತಿಯ ಸಂಖ್ಯೆ ಲಭ್ಯವಾದ ನಂತರ ಒಂದು ಬಾರಿ ಲಸಿಕೆಯ ಬಗ್ಗೆ ಅವಶ್ಯವಿರುವಂತಹ ನವೀಕರಣ ಮಾಡಿಸಬೇಕು. ಅನಂತರ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಿ ಕೊರೋನಾದ ವಿರುದ್ಧ ಲಸಿಕೆ ಪಡೆಯಬೇಕು.

ಈಗ ಮನೆಯಲ್ಲೇ ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಬಹುದು !

ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಮನೆಯಲ್ಲಿ ಕೊರೊನಾದ ಪರೀಕ್ಷಣೆಯನ್ನು ಮಾಡಲು ರ್ಯಾಪಿಡ್ ಆಂಟಿಜನ್ ಟೆಸ್ಟ್‍ಗಾಗಿ ಒಂದು ಕಿಟ್ ಅನ್ನು ಅನುಮೋದಿಸಿದೆ. ಈ ಕಿಟ್‍ನ ಮೂಲಕ ಜನರು ತಮ್ಮ ಮನೆಯಲ್ಲೇ ಮೂಗಿನ ಮೂಲಕ ಕೊರೊನಾ ಪರೀಕ್ಷೆಗಾಗಿ ಒಂದು ಮಾದರಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.