ದರಭಂಗಾ (ಬಿಹಾರ) ದಲ್ಲಿ ಪಿಎಂ ಕೇರ್ ಫಂಡ್‍ನಿಂದ ಸಿಕ್ಕಿದ ೨೫ ವೆಂಟಿಲೇಟರ್ ಗಳು ಕಳೆದ 9 ತಿಂಗಳಿಂದ ಬಳಕೆಯಾಗದೇ ಬಿದ್ದುಕೊಂಡಿವೆ !

ಡ್ರೈ ರನ್ ಪ್ರಕ್ರಿಯೆಯು ವೈಫಲ್ಯವಾಗಿದ್ದರಿಂದ ಬಳಕೆ ಆಗುತ್ತಿಲ್ಲವೆಂದು ಆಸ್ಪತ್ರೆಯ ಹೇಳಿಕೆ !

ಈ ಇಡೀ ಪ್ರಕ್ರಿಯೆಯಲ್ಲಿ ಯಾರ ತಪ್ಪಿದೆ ? ಇದು ಯಾರಿಂದ ಉಳಿದುಕೊಂಡಿದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು !

ದರಭಂಗಾ (ಬಿಹಾರ) – ಕೊರೊನಾದ ಎರಡನೇ ಅಲೆಯಲ್ಲಿ ವೆಂಟಿಲೇಟರ್ ಗಳು, ರೆಮಡೆಸಿವಿರ್ ಚುಚ್ಚುಮದ್ದು, ಆಮ್ಲಜನಕ, ಲಸಿಕೆಗಳು ಇತ್ಯಾದಿಗಳ ಕೊರತೆ ಇದೆ. ಕೇಂದ್ರವು ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದರೆ, ದರಭಂಗಾದಲ್ಲಿ ‘ಪಿಎಮ್‍ಕೇರ್ಸ್ ಫಂಡ್’ನಿಂದ ಒದಗಿಸಲಾದ ೨೫ ವೆಂಟಿಲೇಟರ್‍ಗಳು ಉಪಯೋಗವಾಗದೇ ಹಾಗೇ ಬಿದ್ದುಕೊಂಡಿದೆ. ಕಳೆದ ೯ ತಿಂಗಳಲ್ಲಿ ಒಂದು ಬಾರಿ ಸಹ ಅವುಗಳನ್ನು ಉಪಯೋಗಿಸಿಲ್ಲ ಎಂದು ಹೇಳಲಾಗುತ್ತದೆ.

(ಸೌಜನ್ಯ: Aaj Tak)

ದರಭಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ. ಮಣಿ ಭೂಷಣ ಇವರು ಈ ಬಗ್ಗೆ ಮಾತನಾಡುತ್ತಿರುವಾಗ, ಐಸಿಯು ಸೆಟಪ್‍ನೊಂದಿಗೆ ವೆಂಟಿಲೇಟರ್ ಗಳು ದೊರೆತಿರುವುದು ನಿಜವಾಗಿದೆ, ಈ  ವೆಂಟಿಲೇಟರ್ ಗಳನ್ನು ಬಳಸಲು ತಯಾರಿ ನಡೆಸಿದೆವು; ಆದರೆ ಡ್ರೈ ರನ್ ಪ್ರಕ್ರಿಯೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸದ ಕಾರಣ ಈ ವೆಂಟಿಲೇಟರ್‍ಗಳನ್ನು ಉಪಯೋಗಿಸಲಿಲ್ಲ. ಅದೇರೀತಿ ಈ ಸ್ಥಳದಲ್ಲಿ ಆಮ್ಲಜನಕ ಪ್ಲಾಂಟ್‍ಗಳನ್ನು ಸಹ ಪ್ರಾರಂಭಿಸಲಾಗಿದೆ. ಡ್ರೈ ರನ್ ಪ್ರಕ್ರಿಯೆಯನ್ನು ಮತ್ತೆ ಪರೀಕ್ಷಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಈ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸಲಿವೆ. ಡ್ರೈ ರನ್ ಪ್ರಕ್ರಿಯೆಯನ್ನು ಸರಿಯಾಗಿ ಪ್ರಾರಂಭಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಪ್ರಕ್ರಿಯೆಯು ಯೋಗ್ಯ ರೀತಿಯಲ್ಲಿ ಪ್ರಾರಂಭವಾಗದಿದ್ದರೆ, ರೋಗಿಯ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು.