ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರಿಂದ ಸುಪಾರಿಕೇಸರಿ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಹೋಗಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ! |
ಹಿಂದೂಗಳ ಸಾಧುಗಳು, ಮಹಂತರು, ನಾಯಕರ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಯತ್ನಗಳನ್ನು ಮಾಡಲೇಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ನವ ದೆಹಲಿ – ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್‍ನ ಡಾಸನಾದಲ್ಲಿನ ದೇವಸ್ಥಾನವೊಂದರಲ್ಲಿ ಮಹಂತ ಯತಿ ನರಸಿಂಹಾನಂದ ಸರಸ್ವತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಡಾರ್ ಅಲಿಯಾಸ್ ಜಹಾಂಗೀರ್ ಅವರನ್ನು ಒಂದು ಹೋಟೆಲ್‍ನಿಂದ ಬಂಧಿಸಿದ್ದಾರೆ. ಆತನಿಂದ ಕೇಸರಿ ವಸ್ತ್ರಗಳು, ಪೂಜಾ ಸಾಮಗ್ರಿಗಳು, ಕೈಗೆ ಕಟ್ಟುವ ಕೆಂಪು ದಾರ ಮತ್ತು ಕುಂಕುಮವನ್ನು ವಶಪಡಿಸಿಕೊಳ್ಳಲಾಗಿದೆ. ಕಾಶ್ಮೀರದ ನಿವಾಸಿಯಾಗಿದ್ದ ಜಹಾಂಗೀರ್ ಯತಿ ನರಸಿಂಹಾನಂದ ಸರಸ್ವತಿಯನ್ನು ಕೊಲ್ಲಲು ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯಿಂದ ಸುಪಾರಿ ಪಡೆದಿದ್ದ. ಈ ಸಂಘಟನೆಯ ಪಾಕಿಸ್ತಾನದಲ್ಲಿನ ಓರ್ವ ದೊಡ್ಡ ಭಯೋತ್ಪಾದಕನಿಂದ ಆತ ಸುಪಾರಿ ಪಡೆದಿದ್ದ. ಜಹಾಂಗೀರ್‍ನಿಂದ ೧ ಪಿಸ್ತೂಲ್, ೨ ನಿಯತಕಾಲಿಕೆಗಳು ಮತ್ತು ೧೫ ನಾಡಬಾಂಬ್‍ಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಆತ ಸಾಧುವಿನ ವೇಷದಲ್ಲಿ ದೇವಸ್ಥಾನದೊಳಗೆ ಪ್ರವೇಶಿಸಿ ಹತ್ಯೆ ಮಾಡುವವನಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ. ಯತಿ ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವ್ಯಾಪಕ ವಿರೋಧ ವ್ಯಕ್ತಪಡಿಸಲಾಗಿತ್ತು. ಅದಕ್ಕಾಗಿಯೇ ಅವರನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದೆ.
Assassination plot against Yati Narsighanand Saraswati foiled, Police recovers Bhagwa kurta, Kalava, Mala and Chandan-tika from JeM terrorist https://t.co/OzvTpKBxdp
— OpIndia.com (@OpIndia_com) May 17, 2021
೧. ಜಹಾಂಗೀರ್ ವಾಟ್ಸಾಪ್ ಮೂಲಕ ಅಬಿದ್ ಜೊತೆ ಸಂಪರ್ಕದಲ್ಲಿದ್ದನು. ಅಬಿದ್ ಆತನಿಗೆ ಯತಿ ನರಸಿಂಹಾನಂದ ಅವರ ವೀಡಿಯೊವನ್ನು ತೋರಿಸಿ ಅವನನ್ನು ಕೊಲ್ಲಲು ಪ್ರಚೋದಿಸಿದ್ದನು. ಹತ್ಯೆಗಾಗಿ ಪಿಸ್ತೂಲ್ ಚಲಾಯಿಸಲು ಜಹಾಂಗೀರ್ ಗೆ ತರಬೇತಿ ನೀಡಲಾಗಿತ್ತು. ಹತ್ಯೆಯ ನಂತರ ಜಹಾಂಗೀರ್ ಗೆ ಹಣ ನೀಡುವುದಾಗಿ ಅಬಿದ್ ಭರವಸೆ ನೀಡಿದ್ದರು.
೨. ಏಪ್ರಿಲ್ ೨೩ ರಂದು ಜಹಾಂಗೀರ್ ಕಾಶ್ಮೀರದಿಂದ ದೆಹಲಿಗೆ ಬಂದಿದ್ದನು. ಉಮರ್ ಎಂಬ ವ್ಯಕ್ತಿಯು ಆತನಿಗೆ ದೆಹಲಿಯಲ್ಲಿರಲು ವ್ಯವಸ್ಥೆ ಮಾಡಿದ್ದನು. ಜಹಾಂಗೀರ್ ದೆಹಲಿಗೆ ತೆರಳುವ ಹೊತ್ತಿಗೆ ೩೫೦೦೦ ರೂಪಾಯಿಗಳನ್ನು ಅವನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.
೩. ಪೊಲೀಸರು ಜಹಾಂಗೀರ್ ನ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆಯಿದೆ. ಬುರ್ಹಾನ್ ವಾನಿಯ ಹತ್ಯೆಯಾದ ನಂತರ ಸೈನ್ಯದ ಮೇಲೆ ಕಲ್ಲು ಎಸೆದಿದ್ದಕ್ಕಾಗಿ ಜಹಾಂಗೀರ್ ನನ್ನು ೨೦೧೬ ರಲ್ಲಿ ಬಂಧಿಸಲಾಗಿತ್ತು. (ಕಲ್ಲು ತೂರಾಟ ಮಾಡುವವರು ಮುಂದೆ ಏನು ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಯತ್ನಿಸದಿರುವುದು ಇದು ವ್ಯವಸ್ಥೆಯದ್ದೇ ತಪ್ಪು ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕ)
ಹಿಂದುತ್ವನಿಷ್ಠ ಕಮಲೇಶ ತಿವಾರಿ ಅವರ ಹತ್ಯೆಗೈದಂತೆ ಸಂಚು
ಅಕ್ಟೋಬರ್ ೨೦೧೯ ರಲ್ಲಿ ಗುಜರಾತ್‍ನ ಯೂಸೂಫ್ ಖಾನ್ ಮತ್ತು ಹಾಶಿಮ್ ಅಲಿ ಇವರು ಹಿಂದುವನಿಷ್ಠ ಕಮಲೇಶ ತಿವಾರಿ ಅವರನ್ನು ಹತ್ಯೆ ಮಾಡಿದ್ದರು. ಇಬ್ಬರೂ ಕೇಸರಿ ಬಟ್ಟೆಯನ್ನು ಧರಿಸಿ ತಿವಾರಿಯವರ ಕಚೇರಿಯಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದರು. ಅದೇ ರೀತಿಯಲ್ಲಿ, ಜಹಾಂಗೀರ್ ನು ಸಹ ಯತಿ ನರಸಿಂಹಾನಂದ ಸರಸ್ವತಿಯನ್ನು ಹತ್ಯೆ ಮಾಡಲು ಹೊರಟಿದ್ದನು ಎಂಬುದು ಸ್ಪಷ್ಟವಾಗುತ್ತಿದೆ.