ಚೀನಾದಲ್ಲಿ ಲಿಕ್ವಿಡ್ ಆಕ್ಸಿಜನ್ ಇಲ್ಲವೆಂದು ಈಗ ಭಾರತದಿಂದ ಕೇಳುತ್ತಿರುವ ನೇಪಾಳ !

ಚೀನಾದ ಭರವಸೆಯ ಮೇಲೆ ಭಾರತವನ್ನು ದುರುಗುಟ್ಟುತ್ತಿದ್ದ ನೇಪಾಳಕ್ಕೆ ತನ್ನ ನಾಗರಿಕರ ಪ್ರಾಣ ಉಳಿಸಲು ಕೊನೆಗೆ ಭಾರತದ ಬಳಿಯೇ ಕೈ ಚಾಚಬೇಕಾಗುತ್ತಿದೆ, ಇದನ್ನು ಅದು ಗಮನದಲ್ಲಿಟ್ಟುಕೊಳ್ಳಬೇಕು !

ನವ ದೆಹಲಿ – ಭಾರತದಂತೆಯೇ ನೇಪಾಳದಲ್ಲಿಯೂ ಕೊರೊನಾ ಕೋಲಾಹಲವೆಬ್ಬಿಸಿದೆ. ಪ್ರತಿದಿನ ಸಾವಿರಾರು ಜನರು ಕೊರೊನಾದ ಸೋಂಕಿಗೆ ಒಳಗಾಗುತ್ತಿದ್ದು, ನೂರಾರು ಜನರು ಸಾಯುತ್ತಿದ್ದಾರೆ. ಅಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಅಂತಹ ಸಮಯದಲ್ಲಿ, ನೇಪಾಳವು ಭಾರತದ ಬಳಿ ಸಹಾಯದ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ. ನೇಪಾಳಕ್ಕೆ ಸೀರಮ್ ಇನ್‍ಸ್ಟಿಟ್ಯೂಟ್‍ನ ಕೋವಿಶೀಲ್ಡ್‍ನ ೧೦ ಲಕ್ಷ ಲಸಿಕೆ ಸಿಕ್ಕಿದೆದೆ; ಆದರೆ, ನೇಪಾಳ ಮತ್ತು ಸೀರಮ್‍ನೊಂದಿಗೆ ೨೦ ಲಕ್ಷ ಡೋಸ್‍ಗೆ ಒಪ್ಪಂದ ಮಾಡಿಕೊಂಡಿದೆ. ಶೀಘ್ರದಲ್ಲೇ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸಿಗಬಹುದು ಎಂಬ ಆಶಾವಾದವನ್ನು ನೇಪಾಳವು ವ್ಯಕ್ತಪಡಿಸಿದೆ.

೧. ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಇವರು ವಿದೇಶಾಂಗ ಸಲಹೆಗಾರ ರಂಜನ್ ಭಟ್ಟಾರಾಯ ಇವರು, ಭಾರತೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಈ ಕಷ್ಟದ ಸಮಯದಲ್ಲಿ ಭಾರತವು ಅವರಿಗೆ ಆಮ್ಲಜನಕ, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ ಗಳನ್ನು ಒದಗಿಸಬೇಕೆಂದು ಪ್ರಧಾನಿ ಒಲಿ ಬಯಸಿದ್ದಾರೆ ಎಂದು ಹೇಳಿದರು.

೨. ಒಲಿ ಅವರು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸದ್ಯ ಚೀನಾ ವುಕೊರೊನಾ ವಿರುದ್ಧ ಹೋರಾಡಲು ನೇಪಾಳಕ್ಕೆ ಔಷಧಗಳು ಮತ್ತು ಲಸಿಕೆಗಳನ್ನು ಪೂರೈಸುತ್ತಿದೆ; ಆದರೆ ಕೊರೊನಾದಿಂದ ಬದುಕುಳಿಯಲು ಬೇಕಾದ ಲಿಕ್ವಿಡ್ ಆಕ್ಸಿಜನ ಚೀನಾದ ಬಳಿಯಿಲ್ಲ. ನೇಪಾಳದಲ್ಲಿ ಆಮ್ಲಜನಕದ ಕೊರತೆಯಿಂದ ಅಲ್ಲಿನ ಜನರ ಚಿಂತೆಯು ಹೆಚ್ಚಾಗಿದೆ. ಆಮ್ಲಜನಕದ ಬೇಡಿಕೆ ೧೦ ಪಟ್ಟು ಹೆಚ್ಚಾಗಿದ್ದು ಮತ್ತು ನಾವು ಈ ಬಗ್ಗೆ ಭಾರತ ಸರಕಾರದೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಭಟ್ಟರಾಯ ಈ ಸಮಯದಲ್ಲಿ ಹೇಳಿದರು.