ಮತಾಂತರಗೊಳ್ಳುವಂತೆ ೭ ವರ್ಷದ ಬಾಲಕಿಯ ಮೇಲೆ ಒತ್ತಡ ಹೇರಿದ ೨ ಕ್ರೈಸ್ತ ಮಿಷನರಿಗಳ ವಿರುದ್ಧ ಪೊಲೀಸರಲ್ಲಿ ದೂರು !
ಕ್ರೈಸ್ತ ಮಿಷನರಿಗಳನ್ನು ನಿಯಂತ್ರಿಸಬೇಕಾದರೆ, ಭಾರತದಾದ್ಯಂತ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದು ಅನಿವಾರ್ಯ ! ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮತಾಂತರವನ್ನು ಗಮನದಲ್ಲಿಟ್ಟುಕೊಂಡು, ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯ ಮಾರ್ಗಗಳಿಲ್ಲ !
ಮೊಡಾಕುರಿಚಿ – ನಗರದಲ್ಲಿ ಮತಾಂತರವಾಗುವಂತೆ ೭ ವರ್ಷದ ಬಾಲಕಿಯ ಮೇಲೆ ಒತ್ತಡ ಹೇರಿದ ಇಬ್ಬರು ಕ್ರೈಸ್ತ ಮಿಷನರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಉಷಾ ರಾಣಿ ಮತ್ತು ವರ್ಜೀನಿಯಾ ಎಂಬ ಹೆಸರಿನ ಇಬ್ಬರು ಮಹಿಳೆಯರು ಸಂಬಂಧಿತ ಹುಡುಗಿಯನ್ನು ಚರ್ಚ್‍ಗೆ ಕರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹೇಳಿದರು. ಹುಡುಗಿ ಮತಾಂತರಗೊಳ್ಳುವ ಸಿದ್ಧತೆಯನ್ನು ತೋರಿಸದೇ ಇದ್ದಾಗ ‘ಮತಾಂತರಗೊಳ್ಳದಿದ್ದರೆ, ನಿನ್ನ ಪೋಷಕರು ಅನಾರೋಗ್ಯಕ್ಕೆ ಒಳಗಾಗಿ ಸಾಯುವರು ಮತ್ತು ಅವರು ರಾಕ್ಷಸರ ಕೈಗೆ ಸೇರುತ್ತಾರೆ’, ಎಂದು ಮಹಿಳೆಯರು ಭಯ ಹುಟ್ಟಿಸಿದರು. ಹೆಚ್ಚುತ್ತಿರುವ ಒತ್ತಡದಿಂದ ಉದ್ವಿಗ್ನಳಾದ ಹುಡುಗಿಯು ನಡೆದುದೆಲ್ಲವನ್ನು ವಿವರವಾಗಿ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ಹಿಂದೂ ಮುನಾನಿ ಈ ಸಂಘಟನೆಯ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ.
ತಮಿಳುನಾಡಿನ ಶಾಲೆಗಳು ಮತಾಂತರದ ನೆಲೆಗಳಾಗುತ್ತಿವೆ !
ವಿದ್ಯಾರ್ಥಿಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯಿನಿಯ ವಿರುದ್ಧ ಇಲಾಖೆಯ ಅಡಿಯಲ್ಲಿ ಕ್ರಮ !
ಇದೇ ಮತಕ್ಷೇತ್ರದಲ್ಲಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳನ್ನು ಮತಾಂತರಿಸಲು ಯತ್ನಿಸಿದರು ಎಂದು ಆರೋಪಿಸಲಾಗಿತ್ತು. (ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕಿಯು ಮಕ್ಕಳನ್ನು ಮತಾಂತರಿಸುವ ಕಾರ್ಯದಲ್ಲಿ ತೊಡಗಿದ್ದರೆ, ಹಿಂದೂ ಮಕ್ಕಳ ಭವಿಷ್ಯ ಎಷ್ಟು ಅಂಧಕಾರಮಯವಾಗಿರಬಹುದು, ಎಂಬುದು ನಮಗೆ ಗಮನಕ್ಕೆ ಬರುತ್ತದೆ ! – ಸಂಪಾದಕರು) ಈ ಶಿಕ್ಷಕಿಯ ಬಳಿ ಕ್ರೈಸ್ತ ಧರ್ಮದ ಪುಸ್ತಕಗಳು, ಧನಿಚಿತ್ರಸುರುಳಿಗಳು ಹಾಗೂ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಲು ಆಟದ ಸಾಮಾನುಗಳು ಪತ್ತೆಯಾಗಿದ್ದವು. ಅನಂತರ ವಿಚಾರಣೆಯಾಗಿ ಇಲಾಖೆಯಂತರ್ಗತ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಮತ್ತು ಹಿಂದೂ ಮುನಾನಿಯವರು ಸೇರಿ ದೂರು ನೀಡಿದ್ದರು.