ಶ್ರೀನಗರದಲ್ಲಿ ಇಸ್ರೇಲ್ ವಿರುದ್ಧ ಮತ್ತು ಪ್ಯಾಲೇಸ್ಟೈನ್ ಅನ್ನು ಬೆಂಬಲಿಸಲು ಆಂದೋಲನ ಮಾಡುತ್ತಿದ್ದ ೨೦ ಜನರ ಬಂಧನ

ಕಾಶ್ಮೀರದಲ್ಲಿ ಮತಾಂಧರು ತಮ್ಮ ಧರ್ಮಬಾಂಧವರಿಗಾಗಿ ಕಾಶ್ಮೀರದಲ್ಲಿ ಆಂದೋಲನ ಮಾಡುತ್ತಾರೆ, ಆದರೆ ಭಾರತದಲ್ಲಿ ಹಿಂದೂಗಳು ಇಸ್ಲಾಮಿಕ್ ದೇಶಗಳಲ್ಲಿರುವ ಹಿಂದೂಗಳಿಗಾಗಿ ಬಿಡಿ, ಭಾರತದ್ದೇ ಪೀಡಿತ ಹಿಂದೂಗಳಿಗಾಗಿ ಏನೂ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಶ್ರೀನಗರ (ಜಮ್ಮು – ಕಾಶ್ಮೀರ) – ಇಲ್ಲಿನ ಕೊರೊನಾದಿಂದಾಗಿ ವಿಧಿಸಿರುವ ಸಂಚಾರ ನಿಷೇಧವನ್ನು ಉಲ್ಲಂಘಿಸಿ ಇಸ್ರೇಲ್‍ನ ವಿರುದ್ಧ ಮತ್ತು ಪ್ಯಾಲೆಸ್ಟೈನ್ ಗೆ ಬೆಂಬಲವಾಗಿ ಆಂದೋಲನ ಮಾಡುತ್ತಿದ್ದ ೨೦ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಪ್ಯಾಲೆಸ್ಟೈನ್‍ನ ವಿಷಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಪ್ರದೇಶದ ಶಾಂತಿಯನ್ನು ಭಂಗಗೊಳಿಸಲು ಯಾರಾದರೂ ಪ್ರಯತ್ನಿಸಿದರೆ ಕಠೋರ ಕಾರ್ಯಾಚರಣೆ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.