ಪಂಜಾಬನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವನ್ನು ಸ್ವತಂತ್ರ ಜಿಲ್ಲೆ ಎಂದು ಘೋಷಣೆ !

ಕಾಂಗ್ರೆಸ್ ಸರಕಾರದಿಂದ ಮುಸಲ್ಮಾನರಿಗೆ ಈದ್ ನಿಮಿತ್ತ ಉಡುಗೊರೆ !

ದೇಶದಲ್ಲಿ ಕಾಂಗ್ರೆಸ್‍ನ ಅಸ್ತಿತ್ವವು ಅಳಿವಿನ ಅಂಚಿನಲ್ಲಿದ್ದರೂ, ಅದರ ಮುಸಲ್ಮಾನ ಓಲೈಕೆ ಮಾಡುವ ಪ್ರಯತ್ನಗಳು ಇನ್ನೂ ಮುಗಿದಿಲ್ಲ ಎಂದು ಇದರಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳು ಇಂತಹ ಕಾಂಗ್ರೆಸ್‍ಅನ್ನು ಇತಿಹಾಸದ ಪುಟದಲ್ಲಿ ಸೇರಿಸುವ ಅಗತ್ಯವಿದೆ !

ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್

ಚಂಡೀಗಡ – ಈದ್ ನಿಮಿತ್ತ ಪಂಜಾಬ್‍ನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ರಾಜ್ಯದಲ್ಲಿ ಮಲೆರಕೊಟಲಾ ಈ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯನ್ನು ಸ್ವತಂತ್ರ ಜಿಲ್ಲೆ ಎಂದು ಘೋಷಿಸಿದ್ದಾರೆ. ಆದ್ದರಿಂದ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ ಈಗ ೨೩ ಆಗಿದೆ.

೧. ಮಲೆರಕೋಟಲಾ ಜಿಲ್ಲೆಯಲ್ಲಿ ಮುಸಲ್ಮಾನ ಜನಸಂಖ್ಯೆ ಶೇ. ೬೯, ಹಿಂದೂಗಳು ಶೇ. ೨೦ ಮತ್ತು ಸಿಖ್ಖರು ಕೇವಲ ಶೇ. ೯ ರಷ್ಟು ಇತ್ತು. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ ೨೦೧೧ ರ ಜನಗಣತಿಯ ಪ್ರಕಾರ, ಹೊಸ ಜಿಲ್ಲೆಯಲ್ಲಿ ಮುಸಲ್ಮಾನರು ಶೇ. ೮೦ ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ, ಈಗ ಇದೇ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೯೦ ಆಗಿದೆ.

೨. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಸಿಂಗ್ ಅವರು ಈ ಪ್ರದೇಶವನ್ನು ಸ್ವತಂತ್ರ ಜಿಲ್ಲೆಯನ್ನಾಗಿ ಮಾಡುವುದಾಗಿ ನೀಡಿದ ಭರವಸೆ ಈ ಈದ್‍ನ ದಿನ ಈಡೇರಿದೆ. ಈ ಜಿಲ್ಲೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ಮಹಿಳೆಯರಿಗಾಗಿ ಮಹಾವಿದ್ಯಾಲಯ, ಬಸ್ ನಿಲ್ದಾಣ ಮತ್ತು ಮಹಿಳೆಯರಿಗಾಗಿ ಸ್ವತಂತ್ರ ಪೊಲೀಸ್ ಠಾಣೆಗಾಗಿ ೫೦೦ ಕೋಟಿ ರೂಪಾಯಿ ನೀಡಲಾಗಿದೆ.