- ಆಸ್ಪತ್ರೆಯಿಂದ ಆಮ್ಲಜನಕದ ಕಾಳಸಂತೆ ಮಾಡುತ್ತಿರುವ ಆರೋಪ
- ಬಿಹಾರ ಸರಕಾರವು ಈ ಆರೋಪಗಳ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರಬೇಕು !
ಪಾಟಲಿಪುತ್ರ (ಬಿಹಾರ) – ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಮಹಿಳೆಯು ತನ್ನ ಪತಿಯನ್ನು ಕೊರೊನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಮ್ಲಜನಕದ ಕೊರತೆಯಿಂದ ಅದರ ಕಾಳಸಂತೆ ನಡೆಯುತ್ತಿತ್ತು. ಈ ಮಹಿಳೆ ಆಮ್ಲಜನಕವನ್ನು ಖರೀದಿಸಲು ಹೆಚ್ಚು ಹಣವನ್ನು ಪಾವತಿಸಿದಳು; ಆದರೆ ಅವಳಿಗೆ ತನ್ನ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೊರೊನಾದಿಂದ ನಿಧನರಾದರು. ಇದು ಆಸ್ಪತ್ರೆಯ ಬೇಜವಾಬ್ದಾರಿಯಿಂದ ಆಗಿದೆ ಎಂದು ಮಹಿಳೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ‘ಆಸ್ಪತ್ರೆಯಲ್ಲಿ ನನ್ನ ಗಂಡನೊಂದಿಗೆ ಇದ್ದಾಗ, ನನ್ನ ಪತಿಯ ಎದುರಿನಲ್ಲಿಯೇ ವೈದ್ಯರು ಮತ್ತು ಆಸ್ಪತ್ರೆಯ ಕೆಲವು ಸಿಬ್ಬಂದಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು’ ಎಂದು ಅವರು ಆರೋಪಿಸಿದ್ದಾಳೆ. ಪತ್ನಿಯ ಜೊತೆಗೆ ಅನುಚಿತವಾಗಿ ವರ್ತಿಸುತ್ತಿರುವಾಗ ಪತಿಗೂ ಏನೂ ಮಾಡಲು ಸಾಧ್ಯವಿರಲಿಲ್ಲ ಎಂದು ಆಕೆ ಹೇಳಿದಳು.
Covid victim’s wife alleges molestation, O2 scams in Bihar hospitalshttps://t.co/jpPxzKPmnF
— India TV (@indiatvnews) May 11, 2021
೧. ಪತಿಗೆ ಜ್ವರ ಬಂದಿದ್ದರಿಂದ ಅವರನ್ನು ಏಪ್ರಿಲ್ ೯ ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆ ಸಮಯದಲ್ಲಿ ಅವಳು ಅವರೊಂದಿಗೆ ಇದ್ದಳು. ಆಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಪತಿಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಯಿತು. ಅಲ್ಲಿ ಅನೇಕ ರೋಗಿಗಳು ಸಾಯುತ್ತಿದ್ದರು. ರೋಗಿಯೊಬ್ಬರು ವೈದ್ಯರನ್ನು ಕರೆಯುತ್ತಾ ಕುಸಿದುಬಿದ್ದು, ಅವರ ತಲೆ ಒಡೆಯಿತು; ಆದರೆ ಯಾರೂ ಅವನತ್ತ ಗಮನ ಹರಿಸಲಿಲ್ಲ. ವೈದ್ಯರು ಮತ್ತು ದಾದಿಯರು ಮೊಬೈಲ್ ಫೋನ್‌ನಲ್ಲಿ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
೨. ಈ ಮಹಿಳೆಯ ಸಹೋದರಿಯೂ ಸಹ ಆರೋಪವನ್ನು ಮಾಡುವಾಗ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನನ್ನ ಸಹೋದರಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು ಹಲವು ಬಾರಿ ಅವರು ಅವಳ ದೇಹವನ್ನು ಸ್ಪರ್ಶಿಸಲು ಸಹ ಪ್ರಯತ್ನಿಸಿದರು. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿದೆ ಎಂದು ಹೇಳಿ ಸ್ವತಃ ಆಸ್ಪತ್ರೆಯೇ ೫೦೦೦೦ ರೂಪಾಯಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿತ್ತು ಎಂದು ಆರೋಪಿಸಿದ್ದಾರೆ.