ರೋಗಿಗಳ ಮೇಲೆ ಗೋಮೂತ್ರ ಮತ್ತು ಹಸುವಿನ ಹಾಲಿನ ಮೂಲಕ ಚಿಕಿತ್ಸೆ !
ದೇಶದ ಆರೋಗ್ಯ ಸ್ಥಿತಿಯನ್ನು ಗಮನಿಸಿದರೆ ಕೇಂದ್ರ ಸರಕಾರವು ಗೋಶಾಲಾ ನಿರ್ವಾಹಕರು ಮತ್ತು ಆಯುರ್ವೇದ ವೈದ್ಯರಿಗೆ ಇಂತಹ ಕೇಂದ್ರಗಳನ್ನು ಎಲ್ಲೆಡೆ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಅನಿಸುತ್ತದೆ !
ಬನಾಸಕಾಂಠಾ (ಗುಜರಾತ) – ಇಲ್ಲಿಯ ತೆತೊಡಾ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ಕೋವಿಡ್ ಸೆಂಟರ್‌ನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿನ ರೋಗಿಗಳಿಗೆ ಹಸುವಿನ ಹಾಲು ಮತ್ತು ಗೋಮೂತ್ರದಿಂದ ತಯಾರಿಸಿದ ಔಷಧಿಗಳ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೋವಿಡ್ ಸೆಂಟರ್‌ನ ಹೆಸರು ‘ವೇದಾಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್ ಐಸೊಲೇಶನ್ ಸೆಂಟರ’ ಆಗಿದ್ದು ಮೋಹನ್ ಜಾಧವ್ ಈ ಸೆಂಟರಅನ್ನು ನಡೆಸುತ್ತಿದ್ದಾರೆ. ಕೋವಿಡ್ ಸೆಂಟರನ್ನು ಮೇ ೫ ರಂದು ಉದ್ಘಾಟಿಸಲಾಯಿತು. ಇಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕೊರೊನಾದ ಎರಡನೇ ಅಲೆಯಲ್ಲಿ, ರಾಜ್ಯವು ಆರೋಗ್ಯ ಸೌಲಭ್ಯಗಳ ಕೊರತೆಯನ್ನು ಅನುಭವಿಸುತ್ತಿದೆ. ಇದಕ್ಕಾಗಿ ಗುಜರಾತ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಚಾಟಿ ಬೀಸಿದೆ. ಆದರೂ ರಾಜ್ಯದ ಪರಿಸ್ಥಿತಿಯೂ ಇನ್ನೂ ಭೀಕರವಾಗಿದೆ.
೧. ಮಹೇಶ ಜಾಧವ ಅವರು, ಈ ಸೆಂಟರ್‌ನಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ೮ ರೀತಿಯ ಔಷಧಿಗಳನ್ನು ನೀಡಲಾಗುತ್ತದೆ. ಈ ಔಷಧಿಗಳನ್ನು ಹಸುವಿನ ಹಾಲು, ತುಪ್ಪ ಮತ್ತು ಗೋಮೂತ್ರದಿಂದ ತಯಾರಿಸಲಾಗುತ್ತದೆ. ಈ ರೋಗಿಗಳಿಗೆ ಗೋಮೂತ್ರ ಮತ್ತು ಇತರ ಸಸ್ಯಗಳಿಂದ ತಯಾರಿಸಿದ ಗೋತೀರ್ಥವನ್ನು ನೀಡಲಾಗುತ್ತದೆ. ಅದರೊಂದಿಗೆ ರೋಗಿಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಔಷಧಿಗಳನ್ನು ನೀಡಲಾಗುತ್ತದೆ, ಇದನ್ನು ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ. ಈ ಸೆಂಟರ್‌ನಲ್ಲಿ ಇಬ್ಬರು ಆಯುರ್ವೇದ ವೈದ್ಯರನ್ನು ನೇಮಿಸಲಾಗಿದೆ. ಈ ವೈದ್ಯರು ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಾರೆ. ಅಗತ್ಯವಿದ್ದರೆ ಅಲೋಪತಿ ಔಷಧಿಗಳನ್ನು ಸಹ ರೋಗಿಗಳಿಗೆ ನೀಡಲಾಗುತ್ತದೆ. ಅದಕ್ಕೂ ೨ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಿಸಲಾಗಿದೆ.
೨. ಕೋವಿಡ್ ಆರೈಕೆ ಕೇಂದ್ರವನ್ನು ನಡೆಸಲು ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಬನಾಸಕಾಂಠಾದ ಜಿಲ್ಲಾಧಿಕಾರಿ ಆನಂದ ಪಟೇಲ ತಿಳಿಸಿದ್ದಾರೆ. ಗೋಶಾಲೆಯಲ್ಲಿ ನಡೆಯುತ್ತಿರುವ ಕೋವಿಡ್ ಸೆಂಟರ್ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದಕ್ಕೆ ಅವಕಾಶ ನೀಡಲಾಗಿದೆ. ಎಂದು ಹೇಳದರು.