ಹೀಗೆ ಕೇವಲ ಭಾರತದಲ್ಲಿ ಮಾತ್ರ ಆಗಬಲ್ಲದು ! ಆಮ್ಲಜನಕ ತರಲು ರಸ್ತೆ ಗೊತ್ತಿಲ್ಲದ ಚಾಲಕನನ್ನು ನೀವು ಹೇಗೆ ಕಳುಹಿಸಿದ್ದೀರಿ ? ಇದರಿಂದ ಕೊರೋನಾ ವಿರುದ್ಧದ ಹೋರಾಟದಲ್ಲಿ ವ್ಯವಸ್ಥೆಯ ಸಂಬಂಧಿತ ಅಂಶಗಳು ನಿಜವಾಗಿಯೂ ಎಷ್ಟು ಗಂಭೀರವಾಗಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !
ಭಾಗ್ಯನಗರ – ಇಲ್ಲಿಯ ಆಮ್ಲಜನಕ ಟ್ಯಾಂಕರ್‌ಗೆ ದಾರಿ ತಪ್ಪಿದ ಕಾರಣದಿಂದ ೭ ಕೊರೋನಾ ಪೀಡಿತರಿಗೆ ಆಮ್ಲಜನಕವನ್ನು ತಲುಪಿಸಲು ವಿಳಂಬವಾಯಿತು. ಆದ್ದರಿಂದ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಕೊರೋನಾ ರೋಗಿಗಳಿಗೆ ಇಲ್ಲಿನ ಕಿಂಗ್ ಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ೭ ಮಂದಿ ಗಂಭೀರ ಸ್ಥಿತಿಯಲ್ಲಿದ್ದರು. ಅವರಿಗೆ ತುರ್ತಾಗಿ ಆಮ್ಲಜನಕದ ಅಗತ್ಯವಿತ್ತು. ಆಮ್ಲಜನಕದ ಒತ್ತಡವು ಕಡಿಮೆಯಾಗಿ ರೋಗಿಗಳು ಸಾವನ್ನಪ್ಪಿದರು.
#Breaking | Hyderabad: 7 deaths reportedly due to Oxygen delay at King Koti Govt Hospital. O2 tanker allegedly arrived 12 hours late.
Sowmith with more info. | #JantaMangeJawaab pic.twitter.com/KZt1OJNMEO
— TIMES NOW (@TimesNow) May 10, 2021
ಆಸ್ಪತ್ರೆಯಲ್ಲಿನ ಆಮ್ಲಜನಕ ಟ್ಯಾಂಕ್‌ನಿಂದ ಕಡಿಮೆ ಒತ್ತಡದಲ್ಲಿ ಸರಬರಾಜು ನಡೆಯುತ್ತಿದೆ ಎಂದು ಆಸ್ಪತ್ರೆಯ ಆಡಳಿತವು ತಿಳಿಸಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಆಮ್ಲಜನಕದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು; ಆದರೆ, ಟ್ಯಾಂಕ್ ತುಂಬಲು ಹೊರಟಿದ್ದ ಟ್ಯಾಂಕರ್ ರಸ್ತೆ ತಪ್ಪಿ ೭ ಜನರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ. ನಾರಾಯಣಗುಡಾ ಪೊಲೀಸರು ಕೂಡ ಟ್ಯಾಂಕರ್‌ಗೆ ದಾರಿ ತೋರಿಸಲು ಪ್ರಯತ್ನಿಸಿದರು; ಆದರೆ ಟ್ಯಾಂಕರ್ ಬರಲು ತಡವಾಗಿತ್ತು.