ಕೊರೊನಾದ ನಿಯಮಗಳನ್ನು ಉಲ್ಲಂಘಿಸಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ ಪಠಣ !

ಹರಿದ್ವಾರ ಕುಂಭಮೇಳವನ್ನು ಟೀಕಿಸುತ್ತಿದ್ದ ತಥಾಕಥಿತ ಜಾತ್ಯತೀತವಾದಿಗಳು ಈಗ ಎಲ್ಲಿದ್ದಾರೆ ?

ಛತರಪುರ (ಮಧ್ಯಪ್ರದೇಶ) – ಕೊರೊನಾದ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ಕರ್ಫ್ಯೂ(ಸಂಚಾರ ನಿರ್ಬಂಧ) ಹೇರಲಾಗಿದೆ. ಎಲ್ಲ ರೀತಿಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಹೀಗಿರುವಾಗಲೂ, ಛತರಪುರದ ನೌಗಾವಾದಲ್ಲಿರುವ ಜಾಮಾ ಮಸೀದಿ ಮತ್ತು ಪಲಟನ ಮಸೀದಿಯಲ್ಲಿ ಸಾಮೂಹಿಕ ನಮಾಜು ಪಠಣ ಮಾಡಲಾಯಿತು. ಆದ್ದರಿಂದ ಪೊಲೀಸರು ೨ ಮೌಲ್ವಿ ಸಹಿತ ೨೦೦ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಈ ಮೊದಲು ಸಹ ಇದೆ ರೀತಿಯಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಆಗ ಪೊಲೀಸರು ಕೇವಲ ಎಚ್ಚರಿಕೆ ನೀಡಿ ಅವರನ್ನು ಬಿಟ್ಟಿದ್ದರು. (ಮತಾಂಧರು ಎಂದಿಗೂ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ಆದ್ದರಿಂದ, ಅವರನ್ನು ತಿಳುವಳಿಕೆ ನೀಡಲು ಸಮಯ ವ್ಯರ್ಥ ಮಾಡುವ ಬದಲು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! – ಸಂಪಾದಕ)

ಮುನ್ನಾರ್ (ಕೇರಳ) ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ೪೮೦ ಪಾದ್ರಿಗಳ ವಿರುದ್ಧ ಕ್ರಮ !

ಕೆಲವು ದಿನಗಳ ಹಿಂದೆ, ಕೇರಳದ ಮುನ್ನಾರನಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿದ್ದ ೪೮೦ ಪಾದ್ರಿಗಳ ಮೇಲೂ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಅಪರಾಧ ದಾಖಲಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ೧೦೦ ಪಾದ್ರಿಗಳು ನಂತರ ಕೊರೊನಾ ಸೋಂಕಿಗೆ ತುತ್ತಾಗಿದ್ದರು ಮತ್ತು ಇಬ್ಬರೂ ಸಾವನ್ನಪ್ಪಿದರು.