ಯಾವುದೇ ಧಾರ್ಮಿಕ ಸಮೂಹದಿಂದ ಯಾವುದೇ ರೀತಿಯ ಅಸಹಿಷ್ಣುತನವನ್ನು ತಡೆಗಟ್ಟಬೇಕು !

ಹಿಂದೂಗಳ ಮೆರವಣಿಗೆಯನ್ನು ‘ಪಾಪ’ ಎಂದು ಹೇಳುತ್ತಾ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳ ಮೂಲಕ ಹಾದು ಹೋಗಲು ವಿರೋಧಿಸುವವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಕಪಾಳ ಮೋಕ್ಷ !

ಪೆರಂಬಲೂರು (ತಮಿಳುನಾಡು) – ಕೇವಲ ಒಂದು ಪ್ರದೇಶದಲ್ಲಿ ಒಂದು ನಿರ್ದಿಷ್ಠ ಧರ್ಮದ ಬಹುಸಂಖ್ಯಾತ ಜನರು ಮಾತ್ರ ವಾಸಿಸುತ್ತಿದ್ದಾರೆ; ಎಂಬ ಕಾರಣದಿಂದ ಇತರ ಧರ್ಮಗಳ ಹಬ್ಬಗಳ ಆಚರಣೆ ಅಥವಾ ರಸ್ತೆಯಲ್ಲಿ ಮೆರವಣಿಗೆಗಳನ್ನು ನಡೆಸುವುದನ್ನು ತಡೆಗಟ್ಟಲು ಆಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ತೀರ್ಪು ನೀಡಿದೆ. ಅನೇಕ ವರ್ಷಗಳಿಂದ, ವಿ ಕಲತೂರ್‌ನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೆರವಣಿಗೆಗಳನ್ನು ‘ಪಾಪ’ ಎಂದು ಕರೆದು ಅದಕ್ಕೆ ಮತಾಂಧ ಕಟ್ಟರವಾದಿಗಳಿಂದ ವಿರೋಧಿಸಲಾಗುತ್ತದೆ. ಈ ಸಂಬಂಧ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ‘ಒಂದುವೇಳೆ ಇಂತಹ ಧಾರ್ಮಿಕ ಅಸಹಿಷ್ಣುತನವನ್ನು ಅನುಮತಿಸಿದರೆ, ಅದು ಜಾತ್ಯತೀತ ದೇಶಕ್ಕೆ ಒಳ್ಳೆಯದೆನಿಸುವುದಿಲ್ಲ. ಯಾವುದೇ ಧಾರ್ಮಿಕ ಸಮೂಹದಿಂದ ಮಾಡಲಾಗುವ ಯಾವುದೇ ರೀತಿಯ ಅಸಹಿಷ್ಣುತನವನ್ನು ನಿಲ್ಲಿಸಬೇಕು,’ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸಿದೆ.

೧. ಒಂದು ವೇಳೆ ಅಂತಹ ಸೂತ್ರಗಳನ್ನು ಸ್ವೀಕರಿಸಿದರೆ, ಯಾವುದೇ ಅಲ್ಪಸಂಖ್ಯಾತ ಸಮುದಾಯವು ದೇಶದ ಹೆಚ್ಚಿನ ಭಾಗಗಳಲ್ಲಿ ಹಬ್ಬಗಳನ್ನು ಆಚರಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಧಾರ್ಮಿಕ ಜಗಳಗಳು, ಗಲಭೆಗಳು ನಡೆದು ಇದರಲ್ಲಿ ಜನರ ಪ್ರಾಣಹಾನಿಯಾಗಿ ದೊಡ್ಡ ನಷ್ಟವಾಗಬಹುದು.

೨. ೨೦೧೨ ರಲ್ಲಿ ಪ್ರದೇಶದ ಸ್ಥಳೀಯ ಮುಸಲ್ಮಾನರು ದೇವಸ್ಥಾನದ ಮೆರವಣಿಗೆಯನ್ನು ‘ಪಾಪ’ ಎಂದು ಹೇಳಿ ವಿರೋಧಿಸಿದ್ದರು, ಈ ಹಿನ್ನೆಲೆಯಲ್ಲಿ ಹಿಂದೂಗಳು ಪೊಲೀಸರಿಂದ ಭದ್ರತೆ ಕೋರಿದ್ದರು. ಕೆಲವು ಷರತ್ತುಗಳೊಂದಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ೨೦೧೨ ಕ್ಕಿಂತ ಮೊದಲು ಇಲ್ಲಿ ಯಾವುದೇ ವಿರೋಧ ವಿರಲಿಲ್ಲ.