ಕೊರೋನಾ ಪೀಡಿತ ಹುಡುಗಿಯೊಡನೆ ಅಶ್ಲೀಲವಾಗಿ ವರ್ತಿಸಿದ ೨ ವಾಡ್ ಬಾಯ್ ರನ್ನು ನೌಕರಿಯಿಂದ ವಜಾಗೊಳಿಸಲಾಗಿದೆ

ಕೊರೋನಾದಂತಹ ಸಂಕಟದ ಸಮಯದಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಸಂಯೋಗಿತಾ ಗಂಜ ಪೊಲೀಸ್ ಠಾಣೆಯ ವ್ಯಾಪಿಯಲ್ಲಿರುವ ಒಂದು ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ಯುವತಿಯನ್ನು ದಾಖಲಿಸಲಾಗಿತ್ತು. ತಡರಾತ್ರಿ ಇಬ್ಬರು ವಾರ್ಡ್ ಹುಡುಗರು ಅವಳ ಕೋಣೆಗೆ ಸ್ವಚ್ಛತೆಗೆಂದು ಹೋಗಿದ್ದರು. ಆ ಸಮಯದಲ್ಲಿ ಕೋಣೆಯಲ್ಲಿ ಹುಡುಗಿಯು ಒಂಟಿಯಾಗಿರುವುದನ್ನು ನೋಡಿ, ಇಬ್ಬರು ಅವಳೊಂದಿಗೆ ಅಶ್ಲೀಲವಾಗಿ ವರ್ತಿಸಲು ಪ್ರಯತ್ನಿಸಿದರು. ಅವರು ಅವಳನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದರು. ಈ ಸಮಯದಲ್ಲಿ ಯುವತಿಯು ಕೂಗಿದಾಗ, ಇಬ್ಬರೂ ಓಡಿಹೋದರು. ಆಕೆಯ ಸ್ಥಿತಿ ಸರಿಯಿಲ್ಲದ ಕಾರಣ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿಲ್ಲ; ಆದರೆ ಆಸ್ಪತ್ರೆಯ ಆಡಳಿತವು ವಾರ್ಡ್ ಹುಡುಗರಿಬ್ಬರನ್ನೂ ನೌಕರಿಯಿಂದ ವಜಾಗೊಳಿಸಿದೆ.