ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ೨ ಆಟಗಾರರು ಕರೋನಾ ಸೋಂಕು ತಗಲಿದ್ದರಿಂದ ಸ್ಪರ್ದೆ ರದ್ದು !

ಕೊರೋನಾ ಸೋಂಕು ಹೆಚ್ಚಾಗಿದೆ ಎಂದು ಹರಿದ್ವಾರದಲ್ಲಿ ಕುಂಭಮೇಳವನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿರುವವರು ಐಪಿಎಲ್ ಬಗ್ಗೆ ಏಕೆ ಮೌನವಾಗಿದ್ದಾರೆ ?

ಕೋಲ್ಕತಾ – ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ‘ಕೋಲ್ಕತಾ ನೈಟ್ ರೈಡರ್ಸ್’ ಸಂಘದ ಸ್ಪಿನ್ನರ್‌ಗಳಾದ ವರುಣ ಚಕ್ರವರ್ತಿ ಮತ್ತು ಸಂದೀಪ ವಾರಿಯರ್ ಅವರು ಕರೋನಾ ರೋಗಕ್ಕೆ ತುತ್ತಾಗಿದ್ದಾರೆ.

ಜೊತೆಗೆ ಕೆಲವು ಆಟಗಾರರ ಆರೋಗ್ಯವು ಹದಗೆಟ್ಟಿದೆ ಎಂದು ಸಹ ಹೇಳಲಾಗುತ್ತಿದೆ. ಆದ್ದರಿಂದ ಕೋಲ್ಕತಾ ನೈಟ್ ರೈಡರ್ಸ್’ ಮತ್ತು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ನಡುವಿನ ಪಂದ್ಯವನ್ನು ರದ್ದುಪಡಿಸಲಾಗಿದೆ. ನಿಗದಿತ ಪಂದ್ಯವನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಪೀಡಿತ ಆಟಗಾರರ ಜೊತೆಗಿದ್ದ ಉಳಿದ ಎಲ್ಲ ಆಟಗಾರರ ಕೊರೋನಾ ಪರೀಕ್ಷೆ ನಕಾರಾತ್ಮಕವಾಗಿದೆ ಎಂದು ಬಿಸಿಸಿಐ ಹೇಳಿದೆ.