ಶೀಘ್ರದಲ್ಲೇ ಭಾರತಕ್ಕೆ ಮರಳುವೆ ! – ‘ಸೀರಂ’ ನ ಅದಾರ್ ಪೂನಾವಾಲಾ ಅವರ ಆಶ್ವಾಸನೆ

ಅದಾರ್ ಪೂನಾವಾಲಾ

ಲಂಡನ್ : ಕುಟುಂಬ ಸಹಿತ ಲಂಡನ್‍ಗೆ ಹೋಗಿರುವ ಪುಣೆ ಮೂಲದ ‘ಸೀರಂ’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಶೀಘ್ರದಲ್ಲೇ ಭಾರತಕ್ಕೆ ಮರಳುವ ಭರವಸೆಯನ್ನು ನೀಡಿದ್ದಾರೆ. ಒಂದು ದಿನದ ಹಿಂದೆ, ಕೆಲವು ಭಾರತೀಯ ನಾಯಕರಿಂದ ಕೊರೋನಾ ಲಸಿಕೆಯ ವಿಷಯದಲ್ಲಿ ಕೊಲ್ಲುವ ಬೆದರಿಕೆಗಳನ್ನು ಬರುತ್ತಿವೆ ಎಂದು ಅವರು ಆರೋಪಿಸಿದ್ದರು. ‘ಕೋವಿಶೀಲ್ಡ್’ ಲಸಿಕೆಯನ್ನು ಸೀರಂ ಕಂಪನಿಯಿಂದ ಉತ್ಪಾದಿಸಲಾಗುತ್ತಿದೆ.

ಬ್ರಿಟನ್‍ನಲ್ಲಿ ನಮ್ಮ ಪಾಲುದಾರರೊಂದಿಗಿನ ಸಭೆಯು ಯಶಸ್ವಿಯಾಗಿದೆ ಮತ್ತು ನಾನು ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದೇನೆ. ಲಸಿಕೆ ಉತ್ಪನ್ನವನ್ನು ಪರಿಶೀಲಿಸುವೆನು ಎಂದು ಪೂನವಾಲಾ ಹೇಳಿದರು.

ಮುಖ್ಯಮಂತ್ರಿ ಸಹಿತ ಗಣ್ಯ ವ್ಯಕ್ತಿಗಳಿಂದ ಬೆದರಿಕೆಗಳು

ಸತ್ಯವನ್ನು ಹೇಳಿದರೆ, ನನ್ನ ಶಿರಚ್ಛೇದ ಮಾಡಲಾಗುವುದು !

ಅದಾರ್ ಪೂನಾವಾಲಾ ಇವರು ಲಂಡನ್‍ನಲ್ಲಿನ ಒಂದು ದೈನಿಕ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ನನಗೆ ದೂರವಾಣಿ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ವಿಶೇಷವೆಂದರೆ ಈ ದೂರವಾಣ ಕರೆಗಳನ್ನು ಭಾರತದ ಪ್ರಭಾವಿ ವ್ಯಕ್ತಿಗಳು ಮಾಡುತ್ತಿದ್ದಾರೆ. ಇವುಗಳಲ್ಲಿ ಮುಖ್ಯಮಂತ್ರಿಗಳು, ‘ಇಂಡಸ್ಟ್ರಿ ಚೆಂಬರ್ಸ್’ನ ಮುಖ್ಯಸ್ಥರು ಮತ್ತು ಇತರ ಅನೇಕ ಗಣ್ಯವ್ಯಕ್ತಿಗಳು ಒಳಗೊಂಡಿದ್ದಾರೆ. ಇವರೆಲ್ಲರು ನನಗೆ ಕರೆ ಮಾಡಿ ತಕ್ಷಣ ಲಸಿಕೆಗಳನ್ನು ಪೂರೈಸುವಂತೆ ಒತ್ತಾಯಿಸುತ್ತಿದ್ದಾರೆ. ನಿಜ ಹೇಳಿದರೆ, ನನ್ನ ಶಿರಚ್ಛೇದ ಮಾಡಲಾಗುವುದು ಎಂದು ಹೇಳಿದರು.

ಪ್ರತಿಯೊಬ್ಬರಿಗೂ ‘ಮೊದಲು ನನಗೆ ಲಸಿಕೆ ಸಿಗಬೇಕು; ಎಂದು ಅನಿಸುತ್ತದೆ’ ಆದರೆ ಜನರು ಈ ರೀತಿ ಬೆದರಿಕೆ ಹಾಕುವುದು ತಿಳುವಳಿಕೆಯ ಮಿತಿಯ ಹೊರಗಿನದ್ದಾಗಿದೆ. ಭಾರತದಲ್ಲಿ ಲಸಿಕೆ ಪೂರೈಸುವ ಬಗ್ಗೆ ನನ್ನ ಮೇಲೆ ಸಾಕಷ್ಟು ಒತ್ತಡವಿದೆ. ಜನರು ಈ ರೀತಿ ಅಪೇಕ್ಷೆ ಪಡುತ್ತಾರೆ, ಎಂದು ನನಗೆ ಅನಿಸಿರಲಿಲ್ಲ ಎಂದು ಹೇಳಿದರು.