ಇಂದೋರ್ (ಮಧ್ಯಪ್ರದೇಶ)ನಲ್ಲಿ ೪ ಸಾವಿರ ರೂಪಾಯಿಯ ಚುಚ್ಚುಮದ್ದನ್ನು ೬೦ ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಡಾ. ಅಮೀರ್ ಖಾನ್ ಮತ್ತು ಇಮ್ರಾನ್ ಖಾನ್‌ನ ಬಂಧನ

ಮತಾಂಧರು ಎಷ್ಟು ಉಚ್ಚ ಶಿಕ್ಷಣ ಪಡೆದರೂ ಅವರ ಮೂಲ ಅಪರಾಧ ಪ್ರವೃತ್ತಿಗಳು ಬದಲಾಗುವುದಿಲ್ಲ !

ಇಂದೋರ್ (ಮಧ್ಯಪ್ರದೇಶ) – ಇಲ್ಲಿಯ ಮಯೂರ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರಿಗೆ ೪೦೦೦ ರೂಪಾಯಿಗಳ ಚುಚ್ಚುಮದ್ದನ್ನು ೬೦೦೦೦ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಡಾ. ಅಮೀರ್ ಖಾನ್ ಮತ್ತು ಮೆಡಿಕಲ್ ರಿಪ್ರೆಸೆಂಟೆಟಿವ್ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಅಂಕಿತಾ ಯಾದವ್ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಅಂಕಿತಾ ಯಾದವ್ ಅವರ ಸಹೋದರಿ ಪ್ರೀತಿಯವರು ಕೊರೋನಾ ಪೀಡಿತರಾಗಿದ್ದರಿಂದ ಆಕೆಯನ್ನು ಮಯೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ತಕ್ಷಣ ಇಂಜೆಕ್ಷನ್ ತರಲು ವೈದ್ಯರು ಅಂಕಿತಾ ಯಾದವ್ ಅವರನ್ನು ಹೇಳಿದ್ದರು. ಅದೇ ಆಸ್ಪತ್ರೆಯ ವೈದ್ಯರಾದ ಅಮೀರ್ ಖಾನ್ ಅವರು ಅಂಕಿತಾಗೆ ಚುಚ್ಚುಮದ್ದನ್ನು ನೀಡಬಹುದೆಂದು ಹೇಳಿದರು. ಅದರಂತೆ ಆಕೆ ೬೦,೦೦೦ ರೂಪಾಯಿ ಖಾನ್‌ಗೆ ನೀಡಿ ಚುಚ್ಚುಮದ್ದನ್ನು ಪಡೆದಳು. ನಂತರ ಅಂಕಿತಾ ಬಿಲ್ ಕೇಳಿದಾಗ ಅವರು ನಿರಾಕರಿಸಿದರು. ನಂತರ ಖಾನ್ ಬಿಲ್ ಅನ್ನು ಮೊಬೈಲ್ ನಲ್ಲಿ ಕಳುಹಿಸಿದರು. ಈ ಪಾವತಿಯಲ್ಲಿ ಮುದ್ರಿಸಲಾದ ಮೊಬೈಲ್ ಸಂಖ್ಯೆ ಇಮ್ರಾನ್ ಖಾನ್ ಅವರದ್ದಾಗಿತ್ತು. ಈ ಪಾವತಿ ನಕಲಿ ಎಂದು ತಿಳಿದ ನಂತರ ಅಂಕಿತಾ ಪೊಲೀಸರಿಗೆ ದೂರು ನೀಡಿದರು ನಂತರ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ.