‘ವಯಸ್ಸಾದವರೆಲ್ಲಾ ಸಾಯಲೇ ಬೇಕಾಗುತ್ತದೆ !'(ಅಂತೆ)

ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸರಕಾರದ ಸಚಿವ ಪ್ರೇಮ್ ಸಿಂಗ್ ಪಟೇಲ್ ಅವರ ಹೇಳಿಕೆ !

ಇಂತಹ ಹೇಳಿಕೆಗಳನ್ನು ನೀಡುವ ಸಚಿವರು ಜನತೆಯ ಬಗ್ಗೆ ಎಷ್ಟು ಸಂವೇದನಾಶೀಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ! ಕೊರೋನಾದಂತಹ ವಿಪತ್ತಿನ ಕಾಲದಲ್ಲಿ ಆಡಳಿತಾಧಿಕಾರಿಗಳು, ಆಡಳಿತವು ಜನತೆಯನ್ನು ರಕ್ಷಿಸಲು ಅಸಮರ್ಥವಾಗಿರುವುದರಿಂದ ಈಗ ಜನರು ದೇವರ ಆರಾಧನೆಯನ್ನು ಮಾಡುವುದೇ ಆವಶ್ಯಕವಾಗಿದೆ !

ಸಚಿವ ಪ್ರೇಮ್ ಸಿಂಗ್ ಪಟೇಲ್

ಭೋಪಾಲ (ಮಧ್ಯಪ್ರದೇಶ) – ಕೊರೋನಾದಿಂದ ಆಗುವ ಸಾವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ವಯಸ್ಸಾಗಿರುವವರೆಲ್ಲ ಸಾಯಲೇಬೇಕು ಎಂಬಂತಹ ಹೇಳಿಕೆಯನ್ನು ಮಧ್ಯಪ್ರದೇಶದ ಬಿಜೆಪಿ ಸರಕಾರದಲ್ಲಿ ಸಚಿವ ಪ್ರೇಮ್ ಸಿಂಗ್ ಪಟೇಲ್ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ನೀಡಿದ್ದಾರೆ.

ಕೊರೊನಾದಿಂದ ಉಂಟಾದ ಸಾವುಗಳ ಬಗ್ಗೆ ಪತ್ರಕರ್ತರೊಬ್ಬರು ಪ್ರೇಮ್ ಸಿಂಗ್ ಪಟೇಲರನ್ನು ಕೇಳಿದಾಗ, ಜನರು ತಮ್ಮನ್ನು ಕೊರೋನಾದಿಂದ ರಕ್ಷಿಸಲು ಸಹಕರಿಸಬೇಕು ಜನರು ಮಾಸ್ಕ್ ಧರಿಸುವುದರ ಜೊತೆಗೆ ಸುರಕ್ಷಿತ ಅಂತರವಿಡಬೇಕು. ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಅನೇಕ ಜನರು ಸಾಯುತ್ತಿದ್ದಾರೆ ಎಂದು ನೀವು ಹೇಳಿದ್ದೀರಿ. ಯಾರಿಗೆ ವಯಸ್ಸಾಗಿದೆ ಅವರು ಸಾಯಲೇಬೇಕಾಗುತ್ತದೆ ಎಂದು ಹೇಳಿದರು.