೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ !

  • ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಅನ್ಸಾರಿಯನ್ನು ಬಂಧಿಸುವಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಇವರಿಂದ ಬೇಡಿಕೆ
  • ಹಿಂದೂ ದೇವಾಲಯಗಳಿಗೆ ಯಾರು ಹೋಗಬೇಕು ಮತ್ತು ಯಾರು ಹೋಗಬಾರದು ಎಂಬ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ನೀತಿ ಸಂಹಿತೆಯನ್ನು ರೂಪಿಸುವುದು ಅಗತ್ಯವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ದೇವಾಲಯಕ್ಕೆ ಬರುವ ಇತರ ಧರ್ಮದವರನ್ನು ನಿಷೇಧಿಸುವುದು ಅನಿವಾರ್ಯವಾಗಿದೆ !
ಎಡದಿಂದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಮಧುಪುರ (ಜಾರ್ಖಂಡ್) – ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿಯವರು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ದೇವಘರದ ಪ್ರಸಿದ್ಧ ಬಾಬಾ ಬೈದ್ಯನಾಥ ಶಿವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿವಾದ ಭುಗಿಲೆದ್ದಿದೆ. ಅನ್ಸಾರಿಯನ್ನು ಬಂಧಿಸುವಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಒತ್ತಾಯಿಸಿದ್ದಾರೆ. ಮುಸ್ಲಿಮೇತರರು ಮಕ್ಕಾದ ಮಸೀದಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ದುಬೆ ಹೇಳಿದ್ದಾರೆ, ಅದೇ ರೀತಿ ಹಿಂದೂಯೇತರರು ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಅನ್ಸಾರಿಯವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ. ಅವರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ‘ಗೋಮಾಂಸ ತಿನ್ನುವವರು ದೇವಾಲಯಕ್ಕೆ ಹೇಗೆ ಪ್ರವೇಶಿಸಬಹುದು ?’ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.

ಇರ್ಫಾನ್ ಅನ್ಸಾರಿ ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಯಾವಾಗ ನನ್ನ ಮನಸ್ಸು ಅಸ್ಥಿರವಾಗುತ್ತದೆಯೋ ಆಗ ನಾನು ಬಾಬಾ ಬೈದ್ಯನಾಥ ದೇವಸ್ಥಾನಕ್ಕೆ ಬಂದು ತಲೆ ಬಾಗಿಸಿ ಪೂಜಿಸುತ್ತೇನೆ ಎಂದು ಹೇಳಿದ್ದರು.(ಅನ್ಸಾರಿಯು ನಿಜವಾದ ಶಿವನ ಭಕ್ತರಾಗಿದ್ದಲ್ಲಿ, ಅವರು ಬಹಿರಂಗವಾಗಿ ಹೀಗೆ ಹೇಳಿಕೆಯನ್ನು ನೀಡುವರೇ ? ಮತ್ತು ಹೀಗೆ ಹೇಳಿಕೆ ನೀಡಿದ ನಂತರ ಅವರ ಧರ್ಮದವರ ಪ್ರತಿಕ್ರಿಯೆ ಏನಿರಬಹುದು, ಇದೂ ಒಂದು ಕುತೂಲಹದ ವಿಷಯವಾಗುತ್ತದೆ ! – ಸಂಪಾದಕ)