ಲಾಲೂ ಪ್ರಸಾದ ಯಾದವ್ ಅವರು ಗುಣಮುಖರಾಗಲು ಅವರ ಮಗಳು ರಂಜಾನ್ ಸಮಯದಲ್ಲಿ ರೋಜಾ(ಉಪವಾಸ) ಮಾಡುವರು !

ಹಿಂದೂಗಳಿಗೆ ಧರ್ಮ ಶಿಕ್ಷಣವಿಲ್ಲದ ಕಾರಣ, ಅವರು ಇತರ ಧರ್ಮಗಳ ಧಾರ್ಮಿಕ ಕೃತಿಗಳನ್ನು ಆಚರಿಸಿ ತಮ್ಮನ್ನು ‘ಜಾತ್ಯತೀತ’ ಎಂದು ತೋರಿಸಲು ಪ್ರಯತ್ನಿಸುತ್ತಾರೆ; ಆದರೆ ಭಾರತದ ಇತರ ಧರ್ಮಗಳು ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಎಂದಿಗೂ ಪಾಲಿಸುವುದಿಲ್ಲ ಮತ್ತು ತಾವು ‘ಜಾತ್ಯತೀತ’ರಾಗಿದ್ದೇವೆ ಎಂದು ಯಾವತ್ತೂ ತೋರಿಸಿಕೊಳ್ಳುವುದಿಲ್ಲ, ಎಂಬುದನ್ನು ಹಿಂದೂಗಳು ಎಂದು ಅರಿತುಕೊಳ್ಳುವರು ?

ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ

ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಯಾದವ್ ಅವರ ಆರೋಗ್ಯ ಸುಧಾರಣೆಯಾಗಲಿ ಹಾಗೂ ಅವರಿಗೆ ನ್ಯಾಯಾಲಯದಿಂದ ನ್ಯಾಯ ಸಿಗಲಿ ಅದಕ್ಕಾಗಿ ರಂಜಾನ್ ಸಮಯದಲ್ಲಿ ರೋಜಾ(ಉಪವಾಸ) ಮಾಡಲಿದ್ದಾರೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅದೇರೀತಿ ‘ಚೈತ್ರ ನವರಾತ್ರಿಯನ್ನು ಪೂರ್ಣ ಶ್ರದ್ಧೆಯಿಂದ ಆಚರಿಸಲಾಗುವುದು’, ಎಂದೂ ಅವರು ಹೇಳಿದರು. (ಹಿಂದೂಗಳು ರೋಜಾ ಇಡುವ ಬಗ್ಗೆ ಟೀಕಿಸಬಾರದು; ಆದ್ದರಿಂದ, ಚೈತ್ರ ನವರಾತ್ರಿಯನ್ನು ಸಹ ಆಚರಿಸುತ್ತಿದ್ದೇನೆಂದು ಹೇಳಲು ಪ್ರಯತ್ನಿಸುತ್ತಿದ್ದಾರೆಂಬುದು ಅರ್ಥವಾಗದೇ ಇರುವಷ್ಟು ಹಿಂದೂಗಳು ಮೂರ್ಖರಲ್ಲ ! -ಸಂಪಾದಕರು) ೪ ಹಗರಣಗಳ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಲಾಲುಪ್ರಸಾದ ಇವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.