ಬಾಂಗ್ಲಾದೇಶದಲ್ಲಿ ಕಳೆದ ೫೦ ವರ್ಷಗಳಿಂದ ಹಿಂದೂಗಳ ಮೇಲೆ ಅತ್ಯಾಚಾರ ಆಗುತ್ತಿದೆ ! – ಅಮೇರಿಕಾದ ನಾಯಕಿ ತುಳಸಿ ಗಬಾರ್ಡ

ಅಮೇರಿಕಾದ ರಾಜಕೀಯ ಮುಖಂಡರು ಬಾಂಗ್ಲಾದೇಶದ ಹಿಂದೂಗಳ ಅತ್ಯಾಚಾರದ ಬಗ್ಗೆ ಮಾತನಾಡುತ್ತಾರೆ. ಭಾರತದಲ್ಲಿ ಎಷ್ಟು ಹಿಂದೂ ಜನಪ್ರತಿನಿಧಿಗಳು ಹೀಗೆ ಮಾಡುತ್ತಾರೆ ? ಇದು ಭಾರತೀಯ ರಾಜಕಾರಣಿಗಳಿಗೆ ನಾಚಿಕೆಯ ವಿಷಯವಾಗಿದೆ !

ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಹೆಚ್ಚಿನ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತಿದೆ. ಇದನ್ನು ತಡೆಯಲು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯು ಅನಿವಾರ್ಯವಾಗಿದೆ !

ತುಳಸಿ ಗಬಾರ್ಡ

ನವ ದೆಹಲಿ : ಬಾಂಗ್ಲಾದೇಶದಲ್ಲಿ ಕಳೆದ ೫೦ ವರ್ಷಗಳಿಂದ ಹಿಂದೂಗಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪಾಕ್ ಸೈನ್ಯವು ೧೯೭೧ ರಲ್ಲಿ ಲಕ್ಷಾಂತರ ಬಂಗಾಳಿ ಹಿಂದೂಗಳ ಹತ್ಯೆ ಮಾಡಿತ್ತು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು, ಹಾಗೂ ಲಕ್ಷಾಂತರ ಹಿಂದೂಗಳನ್ನು ಹೊರಹಾಕಲಾಯಿತು. ಢಾಕಾ ವಿಶ್ವವಿದ್ಯಾಲಯದಲ್ಲಿ ೫ ರಿಂದ ೧೦ ಸಾವಿರ ಜನರ ಹತ್ಯೆಯಾಗಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರವೂ ಹಿಂದೂಗಳ ಮೇಲಿನ ದೌರ್ಜನ್ಯಗಳ ಸರಣಿ ನಿಂತಿಲ್ಲ, ಎಂದು ಅಮೆರಿಕದ ನಾಯಕಿ ತುಳಸಿ ಗಬಾರ್ಡ ಇವರು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ವಿಷಾದಿಸಿದರು.