ತ್ರಾವಣಕೊರ ದೇವಸ್ವಂ ಸಮಿತಿಯಿಂದ ದೇವಸ್ಥಾನದ ಭೂಮಿಯಲ್ಲಿ ರಾ.ಸ್ವ.ಸಂಘದಿಂದ ತೆಗೆದುಕೊಳ್ಳಲಾಗುತ್ತಿದ್ದ ತರಬೇತಿಗೆ ನಿಷೇಧ !

ಹಿಂದೂ ದೇವಾಲಯಗಳಲ್ಲಿ ಹಿಂದೂಗಳಿಗೆ ತರಬೇತಿ ನೀಡುವುದನ್ನು ತಡೆಯುವ ತ್ರಾವಣಕೊರ ದೇವಸ್ವಂ ಸಮಿತಿಯು ಹಿಂದೂಗಳದ್ದೋ ಅಥವಾ ಇತರ ಪಂಥದವರದ್ದೋ ? ದೇವಾಲಯಗಳ ನಿರ್ವಹಣೆಯನ್ನು ಭಕ್ತರಿಗೆ ಹಸ್ತಾಂತರಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಸಮಿತಿಯ ಇಂತಹ ನಿರ್ಣಯದಿಂದ ಕಂಡುಬರುತ್ತದೆ ! ಕೇರಳದಲ್ಲಿ ಇಂತಹ ಹಿಂದೂ ವಿರೋಧಿ ಚಟುವಟಿಕೆಗಳನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆ ಅನಿವಾರ್ಯವಾಗಿದೆ !

ಕೊಚ್ಚಿ (ಕೇರಳ) – ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗಳನ್ನು ತ್ರಾವಣಕೊರ ದೇವಸ್ವಂ ಸಮಿತಿಯ ಆಡಳಿತದಡಿಯಲ್ಲಿರುವ ೧ ಸಾವಿರದ ೨೪೨ ಹಿಂದೂ ದೇವಾಲಯಗಳ ಆವರಣದಲ್ಲಿ ಕಾರ್ಯನಿರ್ವಹಿಸುವುದನ್ನು ಮತ್ತು ದೈಹಿಕ ತರಬೇತಿ ಅಥವಾ ಸಾಮೂಹಿಕ ವ್ಯಾಯಾಮಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಅಂತಹ ಅನುಮತಿ ನೀಡುವ ದೇವಸ್ವಂ ಸಮಿತಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಮಿತಿಯು ಎಚ್ಚರಿಸಿದೆ.

೧. ದೇವಸ್ವಂ ಆಯುಕ್ತರು ಮಾರ್ಚ್ ೩೦ ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಕೆಲವು ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಹೇಳಲಾಗಿದೆ. (ಕೇರಳದಲ್ಲಿ ಹಿಂದೂಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಅತ್ಯಾಚಾರವಾಗುತ್ತಿದೆ. ಹೀಗಿರುವಾಗ ಹಿಂದೂಗಳಿಗೆ ದೈಹಿಕ ತರಬೇತಿ ನೀಡುವುದು ಹೇಗೆ ಕಾನೂನುಬಾಹಿರವಾಗಿದೆ ? ಇದರಿಂದ ಸಮಿತಿಯ ಹಿಂದೂದ್ವೇಷವೇ ಕಂಡುಬರುತ್ತದೆ ! – ಸಂಪಾದಕರು)

೨. ದೇವಸ್ವಂ ಸಮಿತಿಯ ಅಧ್ಯಕ್ಷ ಎನ್. ವಾಸು ಅವರು, ದೇವಾಲಯದ ಭೂಮಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದು ಎಂದು ಮಂಡಳಿಯು ಕೆಲವು ವರ್ಷಗಳ ಹಿಂದೆ ನಿರ್ಧರಿಸಿತ್ತು ಎಂದು ಹೇಳಿದರು. ಕೇವಲ ರಾ.ಎಸ್ವಂ.ಸಂಘ ಮಾತ್ರವಲ್ಲ, ಯಾವುದೇ ಸಂಘಟನೆ ಅಥವಾ ಯಾವುದೇ ರಾಜಕೀಯ ಪಕ್ಷಗಳಿಗೆ ದೇವಾಲಯದ ಆವರಣವನ್ನು ಬಳಸಲು ಅನುಮತಿ ನೀಡುವುದಿಲ್ಲ. ಸಂಘದ ವಿರುದ್ಧ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಆದೇಶವನ್ನು ಹೊರಡಿಸಲಾಗಿದೆ. (ಹಿಂದೂದ್ವೇಷಿಗಳು ಸಂಘದ ವಿರುದ್ಧ ದೂರು ನೀಡಿದ್ದರೂ, ಸಾಮಾನ್ಯವಾಗಿ ವಿಷಯದ ವಿವೇಚನೆ ಮಾಡುವುದು ದೇವಸ್ವಂ ಸಮಿತಿಯ ಜವಾಬ್ದಾರಿಯಾಗಿದೆ; ಆದರೆ ಕೇರಳದಲ್ಲಿ ಎಲ್ಲಾಕಡೆಗಳಲ್ಲಿ ಕಮ್ಯುನಿಸ್ಟರ ಪ್ರಭಾವ ಇರುವುದರಿಂದ ಇಂತಹ ಹಿಂದೂ ವಿರೋಧಿ ಕೆಲಸ ಆಗುತ್ತಿದೆ ! – ಸಂಪಾದಕ)

೩. ಇಂತಹ ಘಟನೆಗಳನ್ನು ತಡೆಗಟ್ಟುವಂತಹ ಕ್ರಮ ಕೈಗೊಳ್ಳಲು ಹಾಗೂ ಅವುಗಳನ್ನು ಪ್ರಧಾನ ಕಚೇರಿಗೆ ವರದಿ ಮಾಡಲು ಎಲ್ಲಾ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಆದೇಶವನ್ನು ಪಾಲಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. (ಅಂತಹ ಆದೇಶ ಹೊರಡಿಸುವ ಬದಲು, ರಾಜ್ಯದ ದೇವಾಲಯಗಳಲ್ಲಿ ಧಾರ್ಮಿಕ ಪರಂಪರೆಗಳನ್ನು ಪಾಲಿಸುವಂತಾಗಲು ಏನು ಮಾಡಬಹುದು ಎಂಬುದಕ್ಕಾಗಿ ಸಮಿತಿಯು ತನ್ನ ಅಧಿಕಾರವನ್ನು ಬಳಸಿದ್ದರೆ, ಹಿಂದೂಗಳ ಮತ್ತು ಮಂಡಳಿಗಳ ಒಳಿತಾಗುತ್ತಿತ್ತು ! – ಸಂಪಾದಕರು)