ಕೇರಳದ ಜನರನ್ನು ಕುಡುಕರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಜನತಾ ವಿರೋಧಿ ಕಮ್ಯುನಿಸ್ಟ್ ಸರಕಾರ ! ಆದಾಯದ ಸಲುವಾಗಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಮ್ಯುನಿಸ್ಟ್ ಸರಕಾರ ಜನರ ಹಿತ ಸಾಧಿಸಬಹುದೇ ?
ಕೊಚ್ಚಿ: ಕಮ್ಯುನಿಸ್ಟರ ಆಡಳಿತದ ಕೇರಳದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾರಾಟವಾದ ಮದ್ಯದ ಮೌಲ್ಯ ಬೆಚ್ಚಿಬೀಳಿಸುವ ೬೫ ಸಾವಿರ ಕೋಟಿ ರೂಪಾಯಿ ಆಗಿರುವುದು ಬೆಳಕಿಗೆ ಬಂದಿದೆ. ಮದ್ಯದ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಈ ಅಂಶವು ಬಹಿರಂಗಪಡಿಸಲಾಗಿದೆ. ಅಧಿಕಾರಕ್ಕೆ ಬಂದ ನಂತರ ಕಮ್ಯುನಿಸ್ಟರು ಅಳವಡಿಸಿಕೊಂಡ ಕೆಲವು ನೀತಿಗಳಿಂದಾಗಿ ಮದ್ಯದ ಮಾರಾಟದಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿವೆ. ಈ ಹಿಂದೆ ಅಧಿಕಾರದಲ್ಲಿದ್ದ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್ ಸರಕಾರವು ಬೀಗ ಜಡಿದ ಎಲ್ಲಾ ಮದ್ಯದಂಗಡಿಗಳನ್ನು ಕಮ್ಯುನಿಸ್ಟರು ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ತೆರೆದರು ಮತ್ತು ೨೦೦ ಹೊಸ ಮದ್ಯದಂಗಡಿಗಳನ್ನು ಮತ್ತು ಒಂಬತ್ತು ಕ್ಲಬ್‌ಗಳಿಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದರು. ಕೇರಳದಲ್ಲಿ ೨೦೧೮ ರಲ್ಲಿ ಆದ ಪ್ರವಾಹ ಮತ್ತು೨೦೨೦ ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೇರಳದ ಆರ್ಥಿಕತೆಯು ಕುಸಿದಿದ್ದರೂ, ಮದ್ಯ ಮಾರಾಟದ ಈ ಅಂಕಿಅಂಶಗಳು ಬೆರಗುಗೊಳಿಸುತ್ತದೆ ಎಂದು ಹೇಳಲಾಗುತ್ತದೆ.