ಬಿಜೆಪಿ ಕಾರ್ಯಕರ್ತನಿಂದ ಜಾರ್ಖಂಡ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ !
ಕೇಂದ್ರದಲ್ಲಿ ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇದ್ದರೂ, ಇಂತಹ ನಿಷೇಧವನ್ನು ವಿಧಿಸಿಲ್ಲ. ಅವರೂ ಕೂಡ ಇಂತಹ ನಿಷೇಧ ಹೇರಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ !
ರಾಂಚಿ (ಜಾರ್ಖಂಡ್) – ಬೀದಿಗಳಲ್ಲಿ ನಮಾಜ ಪಠಣ ಮತ್ತು ಮಸೀದಿಗಳ ಮೇಲಿನ ಧ್ವನಿವರ್ದಕಗಳಿಂದ ಅಜಾನ್ ನೀಡುವುದರ ಮೇಲೆ ನಿಷೇಧ ಹೇರುವಂತೆ ಬಿಜೆಪಿ ಕಾರ್ಯಕರ್ತ ಅನುರಂಜನ ಅಶೋಕ ಇವರು ಜಾರ್ಖಂಡ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅವರು ಅರ್ಜಿಯಲ್ಲಿ, ಈ ಅರ್ಜಿಯು ಧರ್ಮಕ್ಕೆ ಸಂಬಂಧಿಸಿಲ್ಲ ಆದರೆ ಶಬ್ದ ಮಾಲಿನ್ಯದ ಸಮಸ್ಯೆಯ ವಿರುದ್ಧ ಹೋರಾಡಲು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
1. ಅಶೋಕ ಅವರು ತಮ್ಮ ಅರ್ಜಿಯಲ್ಲಿ, ಧ್ವನಿವರ್ದಕದ ಶಬ್ದವು ನಿರ್ದಿಷ್ಟ ಡೆಸಿಬಲ್‌ಗಳ ಒಳಗೆ ಇರಬೇಕು; ಆದರೆ ಮಸೀದಿಗಳು ಇದನ್ನು ನಿರಂತರವಾಗಿ ಉಲ್ಲಂಘಿಸುತ್ತಿವೆ. ಕಳೆದ ವರ್ಷ ಸರಕಾರದ ಬಳಿ ಬೇಡಿಕೆ ಮಾಡಲಾಗಿತ್ತು; ಆದರೆ, ಸರಕಾರ ನಿಷ್ಕ್ರಿಯವಾಗಿದ್ದರಿಂದ ನ್ಯಾಯಾಲಯದ ಬಾಗಿಲು ತಟ್ಟಬೇಕಾಯಿತು.
2. ಅಶೊಕ ಅವರು ರಸ್ತೆಯ ಮೇಲೆ ಮಾಡಲಾಗುವ ನಮಾಜ ಪಠಣದ ಬಗ್ಗೆ, ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಆದ್ದರಿಂದ, ನಮಾಜ್ ಪಠಣವನ್ನು ಮಸೀದಿಗಳಲ್ಲಿ ಮಾತ್ರ ನಡೆಸಬೇಕು ಎಂದು ಕೋರಿದ್ದಾರೆ.