ಈ ಹಿಂದೆ ಅಲಹಾಬಾದ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿಯೂ ಇದೇ ರೀತಿಯ ದೂರು ನೀಡಿದ್ದರು. ಮಸೀದಿಗಳಲ್ಲಿನ ಶಬ್ದದಿಂದಾಗಿ ರಾಜ್ಯದ ಜನರು ತೊಂದರೆ ಅನುಭವಿಸುತ್ತಿರುವಾಗ ಆಡಳಿತ ಮತ್ತು ಪೊಲೀಸರು ಕಿವುಡರಾಗಿದ್ದಾರೆಯೇ ? ಈಗ ಸಚಿವರು ಸಹ ಇದರ ವಿರುದ್ಧ ಮಾತನಾಡಲು ಪ್ರಾರಂಭಿಸಿದ್ದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಿಯಮಗಳಿಗೆ ಹೊರತಾಗಿ ಮಸೀದಿಗಳ ಮೇಲೆ ಹಾಕಿರುವ ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಬಲಿಯಾ (ಉತ್ತರ ಪ್ರದೇಶ) – ಇಲ್ಲಿಯ ಬಿಜೆಪಿ ಶಾಸಕ ಮತ್ತು ರಾಜ್ಯ ಸರಕಾರದಲ್ಲಿ ಸಚಿವರಾಗಿರುವ ಆನಂದ ಸ್ವರೂಪ ಶುಕ್ಲಾ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆಯುವ ಮೂಲಕ ಮಸೀದಿಗಳಲ್ಲಿ ಹಾಕಲಾದ ಧ್ವನಿವರ್ಧಕಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ಬದ್ಧರಾಗಿರುವಂತೆ ತಿಳಿಸಿದ್ದಾರೆ.
೧. ಶುಕ್ಲಾ ಇವರು ಬರೆದ ಪತ್ರದಲ್ಲಿ, ಹಳ್ಳಿಗಳಲ್ಲಿನ ಮಸೀದಿಗಳ ಧ್ವನಿವರ್ಧಕದಿಂದ ದಿನವಿಡೀ ವಿವಿಧ ಘೋಷಣೆಗಳನ್ನು ನೀಡಲಾಗುತ್ತಿದೆ ಎಂದು ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ದೂರುಗಳು ಬರುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ನನ್ನ ಮನೆಯ ಹತ್ತಿರವೂ ಒಂದು ಮಸೀದಿ ಇದೆ. ಅಲ್ಲಿ ದಿನವಿಡೀ ಹಣವನ್ನು ಅರ್ಪಣೆ ಮಾಡುವ ಬಗ್ಗೆ ಸಂದೇಶವನ್ನು ನೀಡಲಾಗುತ್ತದೆ. ಇದರಿಂದ ನನಗೆ ಯೋಗ, ಧ್ಯಾನ ಮತ್ತು ಪೂಜೆ ಮಾಡಲು ತೊಂದರೆಯಾಗುತ್ತಿದೆ.
೨. ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾರವರು, ದೇವಾಲಯಗಳ ಮೇಲೆ ಹಾಕಿರುವ ಧ್ವನಿವರ್ಧಕದಿಂದ ಇಂತಹ ಘೋಷಣೆಗಳನ್ನು ಎಂದಿಗೂ ಮಾಡಲಾಗುವುದಿಲ್ಲ ಅಥವಾ ಮಾಡಿದರೆ ಅದರಿಂದ ಜನರಿಗೆ ತೊಂದರೆಯಾಗುವುದಿಲ್ಲ. ದೇವಾಲಯಗಳ ಧ್ವನಿವರ್ಧಕಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ; ಮತ್ತೊಂದೆಡೆ, ಮುಂಜಾನೆ ೪ ರಿಂದ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಜನರಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದರು.