ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಅವರಿಂದ ಸದ್ಗುರು ಜಗ್ಗಿ ವಾಸುದೇವ ಅವರ ದೇವಾಲಯ ಸಂರಕ್ಷಣಾ ಆಂದೋಲನಕ್ಕೆ ಬೆಂಬಲ !

ದೇವಾಲಯಗಳ ನಿರ್ವಹಣೆಯನ್ನು ಭಕ್ತರ ಕೈಯಲ್ಲಿ ನೀಡಬೇಕು !

ಭಾರತದ ಪ್ರಸಿದ್ಧ ಹಿಂದೂ ಆಟಗಾರರು, ನಟರು ಅಥವಾ ವ್ಯಕ್ತಿಗಳು ಹಿಂದೂ ಧರ್ಮದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ; ಏಕೆಂದರೆ ಅವರು ಹಾಗೆ ಮಾತನಾಡಿದರೆ, ಅವರ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ, ಎಂದು ಅವರಿಗೆ ಅನಿಸುತ್ತದೆ. ಆದರೆ ಇಲ್ಲಿ ವೀರೇಂದ್ರ ಸೆಹವಾಗ್ ದೇವಾಲಯಗಳ ಸರಕಾರಿಕರಣವನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಬೇಕು !

ಸದ್ಗುರು ಜಗ್ಗಿ ವಾಸುದೇವ

ನವದೆಹಲಿ : ಸಾವಿರಾರು ವರ್ಷಗಳಷ್ಟು ಹಳೆಯದಾದ ದೇವಾಲಯಗಳ ಶೋಚನೀಯ ಸ್ಥಿತಿಯನ್ನು ನೋಡಿ ಮನಸ್ಸಿಗೆ ತುಂಬಾ ದುಖಃವಾಗಿದೆ. ಒಂದು ಸರಿಯಾದ ಪ್ರಕ್ರಿಯೆಯಲ್ಲಿ ಈ ದೇವಾಲಯಗಳ ದುಃಸ್ಥಿತಿಯನ್ನು ತಡೆಗಟ್ಟುವುದು ಕಾಲಾನುಸಾರ ಅಗತ್ಯವಾಗಿದೆ. ದೇವಾಲಯಗಳ ನಿರ್ವಹಣೆಯನ್ನು ಭಕ್ತರ ಕೈಯಲ್ಲಿ ನೀಡಬೇಕು, ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಟ್ವೀಟ್ ಮಾಡಿದ್ದಾರೆ. ತಮಿಳುನಾಡಿನ ದೇವಾಲಯಗಳ ದುಃಸ್ಥಿತಿಯ ಬಗ್ಗೆ ಸದ್ಗುರು ಜಗ್ಗಿ ವಾಸುದೇವರವರು ಪ್ರಾರಂಭಿಸಿರುವ ಆಂದೋಲನವನ್ನು ಅವರು ಬೆಂಬಲಿಸಿದ್ದಾರೆ.

ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು ಚೆನ್ನೈನ ಒಂದು ದೇವಾಲಯದ ಸ್ಥಿತಿಯ ವೀಡಿಯೊವನ್ನು ರಿಟ್ವೀಟ್ ಮಾಡಿದ್ದರು ಮತ್ತು ತಮಿಳುನಾಡು ಮುಖ್ಯಮಂತ್ರಿ ಕಚೇರಿ ಮತ್ತು ವೀರೇಂದ್ರ ಸೆಹವಾಗ್ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಸೆಹವಾಗ್ ಟ್ವೀಟ್ ಮಾಡಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜಗ್ಗಿ ವಾಸುದೇವ ಇವರು ಈ ಉಪಕ್ರಮದ ಅಡಿಯಲ್ಲಿ ತಮಿಳುನಾಡಿನ ೪೪ ಸಾವಿರದ ೨೧೨ ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ತೆಗೆದು ಭಕ್ತರಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ. ಸರಕಾರ ಈ ದೇವಾಲಯಗಳಿಗೆ ಏನೂ ಮಾಡುತ್ತಿಲ್ಲ ಎಂದು ಕಂಡುಬರುತ್ತದೆ ಎಂದು ಅವರು ಈ ಬೇಡಿಕೆಯ ಹಿಂದಿನ ಕಾರಣವನ್ನು ಹೇಳಿದ್ದಾರೆ.