ಕಳೆದ ೭ ವರ್ಷಗಳಲ್ಲಿ ೮೦೦ ಸೈನಿಕರ ಆತ್ಮಹತ್ಯೆ !

* ಮಾನಸಿಕವಾಗಿ ಅಸಮರ್ಥರಾದ ಸೈನಿಕರು ಜನರನ್ನು ರಕ್ಷಿಸುವುದಾದರೂ ಹೇಗೆ ? ಸೈನಿಕರು ಸಾಧನೆಯನ್ನು ಮಾಡುತ್ತಿಲ್ಲ ಹಾಗಾಗಿ ‘ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಸ್ಥಿರವಾಗಿರುವುದು ಹೇಗೆ’, ಎಂಬುದು ಅವರಿಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಂತಹ ಹೆಜ್ಜೆ ಇಡುತ್ತಾರೆ !

* ಆಧುನಿಕ ಶಿಕ್ಷಣದಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವಂತಹ ಯಾವುದೇ ನಿಖರವಾದ ಉಪಾಯಯೋಜನೆಗಳಿಲ್ಲ, ಇದು ಅದರ ದೊಡ್ಡ ವೈಫಲ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯರಿಂದ ಸಾಧನೆ ಮಾಡಿಸಿಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ !

ರಕ್ಷಣಾ ರಾಜ್ಯ ಸಚಿವ ಶ್ರೀಪಾದ ನಾಯಿಕ

ನವ ದೆಹಲಿ : ಕಳೆದ ಏಳು ವರ್ಷಗಳಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ೮೦೦ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ರಾಜ್ಯ ಸಚಿವ ಶ್ರೀಪಾದ ನಾಯಿಕ ಇವರು ಒಂದು ಲಿಖಿತ ಪ್ರಶ್ನೆಗೆ ಉತ್ತರಿಸುವಾಗ ಈ ಮಾಹಿತಿಯನ್ನು ನೀಡಿದ್ದಾರೆ. ೨೦೧೪ ರಿಂದ ಸೈನ್ಯದಲ್ಲಿ ೫೯೧ ಸೈನಿಕರು, ವಾಯುಸೇನೆಯಲ್ಲಿ ೧೬೦ ಮತ್ತು ನೌಕಾಪಡೆಯ ೩೬ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಯಿಕ ಹೇಳಿದ್ದಾರೆ.