‘ಪ್ಲೆಸಸ್ ಆಫ್ ವರ್ಶಿಪ್’ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿರುದ್ಧ ಮಸೀದಿಯ ಸಂರಕ್ಷಕರಿಂದ ಅರ್ಜಿ

ಮೊಘಲ್ ಆಕ್ರಮಣಕಾರರು ದೇಶದ ಸಾವಿರಾರು ಹಿಂದೂ ದೇವಾಲಯಗಳನ್ನು ಅತಿಕ್ರಮಣ ಮಾಡಿ ಅವುಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಅವುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಈ ಕಾನೂನಿಂದಾಗಿ ಅವುಗಳಿಗೆ ರಕ್ಷಣೆ ಸಿಕ್ಕಿದೆ. ಈಗ ಕಾನೂನನ್ನು ರದ್ದುಗೊಳಿಸಿದರೆ, ಮತಾಂಧರು ಅಂತಹ ದೇವಾಲಯಗಳ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ ಈ ರೀತಿಯ ವಿರೋಧಗಳು ವ್ಯಕ್ತ ಆಗುತ್ತಿದೆ. ಮತಾಂಧರಲ್ಲಿ ಯಾವುದೇ ಸರ್ವಧರ್ಮ ಸಮಭಾವವಿಲ್ಲದ ಕಾರಣ ಅವರು ಈ ರೀತಿ ವಿರೋಧಿಸುತ್ತಿದ್ದಾರೆ !

ನವ ದೆಹಲಿ : ‘ಪ್ಲೆಸಸ್ ಆಫ್ ವರ್ಶಿಪ್ ೧೯೯೧’ ಅನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಲಕ್ಷ್ಮಣಪುರಿಯ ತಿಲೆವಾಲಿ ಮಸೀದಿಯ ಸಂರಕ್ಷಕ ವಾಸಿಫ್ ಹಸನ್ ಈ ಅರ್ಜಿಯನ್ನು ವಿರೋಧಿಸಿ, ಅದನ್ನು ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಹಸನ ಇವರು ತಮ್ಮ ಅರ್ಜಿಯಲ್ಲಿ, ದೇಶದ ಮುಸಲ್ಮಾನರನ್ನು ಪ್ರತ್ಯೇಕಗೊಳಿಸುವುದೇ ಈ ಅರ್ಜಿಯ ಉದ್ದೇಶವಾಗಿದೆ. ಅದೇರೀತಿ ವಿದೇಶಿ ಆಕ್ರಮಣಕಾರರು ಭಾರತದಲ್ಲಿನ ಧಾರ್ಮಿಕ ಸ್ಥಳಗಳನ್ನು ನೆಲಸಮ ಮಾಡಿದ್ದಾರೆ ಎಂದು ತೋರಿಸಲು ಪ್ರಯತ್ನಿಸಿದೆ, ಎಂದು ಹೇಳಿದ್ದಾರೆ.. (ಅದರಲ್ಲಿ ತಪ್ಪೇನಿದೆ ? ಇದಂತೂ ಇತಿಹಾಸವೇ ಆಗಿದೆ ! – ಸಂಪಾದಕರು) ಭಾರತೀಯರಿಗೆ ಹರಿದ್ವಾರ, ಬದ್ರಿನಾಥದಲ್ಲಿನ ದೇವಸ್ಥಾನಗಳ ಬಗ್ಗೆ ಎಷ್ಟು ಗೌರವವಿದೆಯೋ ಅಷ್ಟೇ ಲಕ್ಷಣಪುರಿ ಹಾಗೂ ದೆಹಲಿಯ ಮಸಿದಿಯ ಬಗ್ಗೆಯೂ ಗೌರವವಿದೆ. ಗೋವಾದಲ್ಲಿ ಚರ್ಚ್ ಹಾಗೂ ಅಸ್ಸಾಂದಲ್ಲಿನ ಕಾಮಾಖ್ಯಾ ದೇವಸ್ಥಾನವೂ ಸಹ ಭಾರತೀಯರಿಗೆ ಅಷ್ಟೇ ಪ್ರಿಯವಾಗಿದೆ ಎಂದು ಹೇಳಿದ್ದಾರೆ.