ಹಿಮಾಚಲ ಪ್ರದೇಶದ ಶಕ್ತಿಪೀಠವಾಗಿರುವ ಜ್ವಾಲಾಮುಖಿ ದೇವಸ್ಥಾನದಲ್ಲಿ ಮುಸ್ಲಿಂ ಅಧಿಕಾರಿಗಳ ನೇಮಕ ! – ಡಾ. ಸುಬ್ರಹ್ಮಣ್ಯಂ ಸ್ವಾಮಿಯ ಆರೋಪ

ಅಧಿಕಾರಿಗಳ ವರ್ಗಾವಣೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಸ್ಪಷ್ಟೀಕರಣ !

ನವದೆಹಲಿ : ಹಿಮಾಚಲ ಪ್ರದೇಶದ ಬಿಜೆಪಿ ಸರಕಾರವು ಶಕ್ತಿಪೀಠವಾಗಿರುವ ಜ್ವಾಲಾಮುಖಿ ದೇವಾಲಯದ ಜವಾಬ್ದಾರಿಯನ್ನು ಹಿಂದೂಯೇತರರಿಗೆ (ಮುಸ್ಲಿಮರಿಗೆ) ನೀಡಿದೆ. ರಾಜ್ಯದ ಅರ್ಧಕ್ಕಿಂತ ಹೆಚ್ಚು ದೇವಾಲಯಗಳಂತೆ ಈ ದೇವಸ್ಥಾನವೂ ಸರಕಾರೀಕರಣಗೊಂಡಿದೆ.

ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಹಿಂದೂ ದೇವಾಲಯವನ್ನು ತಮ್ಮದೇ ಖಾಸಗಿ ಆಸ್ತಿಯಂತೆ ಹಿಂದೂ ದೇವಾಲಯಗಳನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ಆರೋಪದ ಮೇಲೆ, ಕಂಗಡ ಜಿಲ್ಲಾಧಿಕಾರಿಯವರು, ಮೇಲೆ ತಿಳಿಸಿದ ಅಧಿಕಾರಿಗಳನ್ನು ಹಿಂದಿನ ಸರಕಾರವು ೨೦೧೭ ರಲ್ಲಿ ನೇಮಕ ಮಾಡಿದೆ ಎಂದು ಹೇಳಿದ್ದಾರೆ. (೨೦೧೭ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಂದು ವೇಳೆ ಅವರು ಈ ಶಕ್ತಿ ಪೀಠದಲ್ಲಿ ಹಿಂದೂಯೇತರರನ್ನು ನೇಮಕ ಮಾಡಿದ್ದರೆ, ಹಿಂದೂಗಳು ಮತ್ತು ಈಗಿನ ಬಿಜೆಪಿ ಸರಕಾರ ಅವರಿಂದ ಸ್ಪಷ್ಟೀಕರಣ ಕೇಳಬೇಕು ! – ಸಂಪಾದಕ) ಜನರು ದೇವಾಲಯದ ಅಕ್ಕಪಕ್ಕದಲ್ಲಿ ಅವರ ಉಪಸ್ಥಿತಿಯ ಬಗ್ಗೆ ಆಕ್ಷೇಪಣೆ ಎತ್ತಿದ್ದರು. ಈಗ ಕಾನೂನು ಸುವ್ಯವಸ್ಥೆ ಕಾಪಾಡಲು ನಾನು ಅವರನ್ನು ದೇವಾಲಯದಿಂದ ೫೦ ಕಿ.ಮೀ ದೂರದಲ್ಲಿ ಸ್ಥಳಾಂತರಿಸಿ ಪ್ರಧಾನ ಕಚೇರಿಗೆ ಕರೆಸಿದ್ದೇನೆ ಎಂದು ಹೇಳಿದರು.