ತಿರುಪತಿ ಬಾಲಾಜಿ ದೇವಸ್ಥಾನದ ಭಕ್ತರು ನೀಡುವ ಕೂದಲು ಚೀನಾಕ್ಕೆ ಕಳ್ಳಸಾಗಣೆ

ಮಿಜೋರಾಂನಲ್ಲಿ ೧ ಕೋಟಿ ೮೦ ಲಕ್ಷ ಮೌಲ್ಯದ ಕೂದಲು ವಶಕ್ಕೆ !

ಈ ರೀತಿಯ ಕಳ್ಳಸಾಗಣೆ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಿಂದ ನಡೆಯುವುದು ಭದ್ರತಾ ಪಡೆಗಳಿಗೆ ನಾಚಿಕೆಯ ಸಂಗತಿಯಾಗಿದೆ ! ಇಂತಹ ನಿಷ್ಪ್ರಯೋಜಕ ಭದ್ರತಾ ಕಾರ್ಯವಿಧಾನವು ನಾಳೆ ಭಯೋತ್ಪಾದಕ ದಾಳಿಗೆ ಕಾರಣವಾದರೆ ಆಶ್ಚರ್ಯಪಡಬೇಡಿ !

ಬೆಂಗಳೂರು : ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಹೋಗುವ ಭಕ್ತರು ಅಲ್ಲಿ ಕೂದಲು ಅರ್ಪಿಸುತ್ತಾರೆ. ಇದು ಭಕ್ತರ ಹರಕೆಗಳನ್ನು ತೀರಿಸುವ ಒಂದು ವಿಧಾನವಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ಕೂದಲು ಅರ್ಪಿಸುತ್ತಾರೆ. ಆದರೆ ಕತ್ತರಿಸಿದ ಕೂದಲನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಇದೀಗ ಬೆಳಕಿಗೆ ಬಂದಿದೆ. ಅಸ್ಸಾಂ ರೈಫಲ್ಸ್ ಈ ವಿಷಯವನ್ನು ಬಹಿರಂಗಪಡಿಸಿದೆ. ಮ್ಯಾನ್ಮಾರ್ ಮೂಲಕ ಚೀನಾಗೆ ಕಳ್ಳಸಾಗಣೆ ನಡೆಯುತ್ತಿತ್ತು.

ಹಿರಿಯ ಅಧಿಕಾರಿ ನೀಡಿದ ಮಾಹಿತಿಯ ಪ್ರಕಾರ, ಎರಡು ಟ್ರಕ್‌ಗಳಲ್ಲಿ ಗೋಣಿಗಳಲ್ಲಿ ತುಂಬಿಸಿ ಈ ಕೂದಲನ್ನು ಕೊಂಡು ಹೋಗಲಾಗುತ್ತಿತ್ತು. ಟ್ರಕ್‌ನಲ್ಲಿ ೫೦ ಕೆಜಿ ಕೂದಲು ಪತ್ತೆಯಾಗಿದೆ. ಇದರ ಬೆಲೆ ೧ ಕೋಟಿ ೮೦ ಲಕ್ಷ ರೂಪಾಯಿ ಇದೆ. ಟ್ರಕ್ ಒಳಗಿದ್ದವರು ತಾವು ತಿರುಪತಿಯಿಂದ ಮ್ಯಾನ್ಮಾರ್‌ಗೆ ಕೊಂಡೊಯ್ಯುತ್ತಿದ್ದೇವೆ ಎಂದು ಒಪ್ಪಿಕೊಂಡರು ಮತ್ತು ಅಲ್ಲಿಂದ ಅದನ್ನು ಥೈಲ್ಯಾಂಡ್‌ಗೆ ಕಳುಹಿಸಬೇಕಾಗಿತ್ತು. ಚೀನಾದಲ್ಲಿ ಈ ಕೂದಲನ್ನು ‘ವಿಗ್’ ತಯಾರಿಸಲು ಬಳಸಲಾಗುತ್ತದೆ. ಈ ‘ವಿಗ್’ ಅನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ವಿಶ್ವದ ೭೦% ವಿಗ್‌ಗಳನ್ನು ಚೀನಾ ರಫ್ತು ಮಾಡುತ್ತದೆ. ತಿರುಪತಿಯಲ್ಲಿ ಮಾತ್ರವಲ್ಲ, ಇತರ ಧಾರ್ಮಿಕ ಸ್ಥಳಗಳಿಂದ ಕೂಡ ಕೂದಲನ್ನು ಈ ರೀತಿ ಕಳ್ಳಸಾಗಣೆ ಮಾಡಿ ಚೀನಾಕ್ಕೆ ಕಳುಹಿಸಲಾಗುತ್ತಿದೆ.