ಕೇರಳ ಬ್ರಾಹ್ಮಣ ಸಭೆಯು ನಿಷೇಧ ವ್ಯಕ್ತಪಡಿಸಿದ್ದರಿಂದ ‘ಪಟ್ಟರುಡೆ ಮಟನ ಕರಿ’ ಎಂಬ ಕಿರುಚಿತ್ರದ ಹೆಸರಿನಲ್ಲಿ ಬದಲಾವಣೆ !

ಬ್ರಾಹ್ಮಣರನ್ನು ಅವಮಾನಿಸುವ ಹೆಸರನ್ನು ಬದಲಾಯಿಸಲು ಒತ್ತಾಯಿಸಿದ ಕೇರಳ ಬ್ರಾಹ್ಮಣ ಸಭೆಗೆ ಅಭಿನಂದನೆಗಳು !

ಕೊಚ್ಚಿ (ಕೇರಳ) – ಕೇರಳ ಬ್ರಾಹ್ಮಣ ಸಭೆಯ ಸದಸ್ಯರು ವ್ಯಕ್ತಪಡಿಸಿದ ಆಕ್ರೋಶದಿಂದಾಗಿ ‘ಪಟ್ಟರುಡೆ ಮಟನ ಕರಿ’ ಎಂಬ ಕಿರುಚಿತ್ರದ ಶೀರ್ಷಿಕೆಯನ್ನು ‘ಮಟನ ಕರಿ’ ಎಂದು ಬದಲಾಯಿಸಲಾಗಿದೆ.

೧. ಕೇರಳ ಬ್ರಾಹ್ಮಣ ಸಭೆಯ ರಾಜ್ಯ ಅಧ್ಯಕ್ಷ ಕರೀಮಪುಳಾ ರಾಮನ್ ಸಾರ್ವಜನಿಕ ಪತ್ರದಲ್ಲಿ, ಬ್ರಾಹ್ಮಣರನ್ನು ಅವಮಾನಿಸಲು ಮಲಯಾಳಂ ಭಾಷೆಯಲ್ಲಿ ‘ಪಟ್ಟರ್’ ಎಂಬ ಪದವನ್ನು ಬಳಸಲಾಗುತ್ತದೆ. ಬ್ರಾಹ್ಮಣರು ಸಸ್ಯಾಹಾರಿಗಳು ಎಂಬುದು ಎಲ್ಲರಿಗೆ ಗೊತ್ತಿದ್ದರೂ, ಕಿರುಚಿತ್ರಕ್ಕೆ ‘ಪಟ್ಟರುಡೆ ಮಟನ ಕರಿ’ ಎಂಬ ಹೆಸರನ್ನು ನೀಡಿ ಉದ್ದೇಶಪೂರ್ವಕವಾಗಿ ಬ್ರಾಹ್ಮಣರನ್ನು ಅವಮಾನಿಸಲು ಪ್ರಯತ್ನಿಸಲಾಗಿದೆ.

೨. ಕಿರುಚಿತ್ರದ ಹೆಸರನ್ನು ಒಳಗೊಂಡಂತೆ ಬೇರೆ ಯಾವುದೇ ಭಾಗವು ಬ್ರಾಹ್ಮಣ ಸಮುದಾಯಕ್ಕೆ ಅವಹೇಳನಕಾರಿ ಅಥವಾ ಆಕ್ಷೆಪಾರ್ಹವಿದೆಯೇ’, ಎಂದು ನಾವು ಕಂಡುಹಿಡಿಯುವ ವಿಚಾರವಿದೆ. ಹಾಗಿದ್ದಲ್ಲಿ ನಾವು ಕಥೆಯನ್ನು ಬದಲಾಯಿಸುವ ಬಗ್ಗೆಯೂ ಮಾತನಾಡುತ್ತೇವೆ ಎಂದು ಕರಿಮ್‌ಪುಳಾ ರಾಮನ್ ಹೇಳಿದರು.

೩. ಯೂಟ್ಯೂಬ್‌ನಲ್ಲಿ ಮಾಡಿದ ಈ ಚಲನಚಿತ್ರದ ಜಾಹೀರಾತಿನಲ್ಲಿ ಸುಧಾರಿತ ಹೆಸರು (ಮಟನ್ ಕರಿ) ಕಾಣಿಸಿಕೊಳ್ಳುತ್ತದೆ. ಅರ್ಜುನ್ ಬಾಬು ನಿರ್ದೇಶನದ ಕಿರುಚಿತ್ರ ಮಾರ್ಚ್ ೨೦ ರಂದು ತೆರೆ ಕಾಣಲಿದೆ.