ಒಡಿಶಾ : ಪುರಾತತ್ವ ಇಲಾಖೆಯ ನಿರ್ಲಕ್ಷ್ಯ, ಒಡೆದು ಹೋದ ೨ ಐತಿಹಾಸಿಕ ಕಂಬಗಳು !

ಭಾರತದಲ್ಲಿನ ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳಗಳು, ದೇವಾಲಯಗಳು ಇತ್ಯಾದಿಗಳ ನಿರ್ಲಕ್ಷ್ಯದಿಂದಾಗಿ, ಅವುಗಳ ದುಸ್ಥಿತಿಯ ಉದಾಹರಣೆಗಳು ಬೆಳಕಿಗೆ ಬರುತ್ತಿವೆ. ಐತಿಹಾಸಿಕ ವಸ್ತುಗಳು ಮತ್ತು ವಾಸ್ತುಗಳ ಬಗ್ಗೆ ಸಂವೇದನಾಶೂನ್ಯತೆ ಮತ್ತು ಗಂಭೀರವಾಗಿರದ ಈ ವಿಭಾಗವನ್ನು ತೆಗೆದು ಹಾಕಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಆವಶ್ಯಕ !

ಶ್ರೀ. ಅನಿಲ ಧೀರ್

ಭುವನೇಶ್ವರ (ಒಡಿಶಾ) – ಇಲ್ಲಿಯ ಲಿಂಗರಾಜ್ ದೇವಸ್ಥಾನದ ಬಳಿಯಿರುವ ಶಿವತೀರ್ಥ ಮಠದ ಆವರಣದಲ್ಲಿ ಉತ್ಖನನ ಮಾಡುವಾಗ ೪ ಕಂಬಗಳು ಪತ್ತೆಯಾಗಿದ್ದು, ಮೇಲಕ್ಕೆತ್ತಿದಾಗ ಅವುಗಳಲ್ಲಿ ೨ ಮುರಿದವು ಎಂಬ ಮಾಹಿತಿಯನ್ನು ಹಿರಿಯ ಪತ್ರಕರ್ತ ಹಾಗೂ ಹಿಂದುತ್ವನಿಷ್ಠ ಶ್ರೀ. ಅನಿಲ ಧೀರ್ ತಿಳಿಸಿದ್ದಾರೆ. ಪ್ರತಿಯೊಂದು ೨೦ ಅಡಿ ಉದ್ದ ಮತ್ತು ೧೫ ಟನ್ ತೂಕ ಇರುವ ಕಂಬಗಳು ವಿರಳವಾಗಿರುತ್ತವೆ.

ಈ ಕಂಬಗಳು ದೊರೆತಾಗ ಅದರ ಮಾಹಿತಿಯನ್ನು ಶ್ರೀ. ಧೀರ್ ಇವರು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರು ಮತ್ತು ಕಂಬಗಳನ್ನು ಸುರಕ್ಷಿತವಾಗಿಡಲು ವಿನಂತಿಸಿದರು. ಅದರಂತೆ ಕಂಬವನ್ನು ಮೇಲಕ್ಕೆತ್ತಲು ಇಲಾಖೆ ವ್ಯವಸ್ಥೆ ಮಾಡಿತು; ಆದರೆ ಅವರ ನಿರ್ಲಕ್ಷ್ಯದಿಂದಾಗಿ ೨ ಕಂಬಗಳು ಮುರಿದು ಹೋಗಿವೆ. (ಪುರಾತತ್ವ ಇಲಾಖೆಯು ಪ್ರಾಚೀನ ವಸ್ತುಗಳನ್ನು ನಿರ್ವಹಿಸುವ ಬಗ್ಗೆ ಎಷ್ಟು ಅಸಡ್ಡೆ ಹೊಂದಿದೆ ಎಂಬುದನ್ನು ಇದು ಮತ್ತೊಮ್ಮೆ ತೋರಿಸುತ್ತದೆ ! – ಸಂಪಾದಕ)