ಕೇರಳ : ದಾಳಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗಾಯ

ಸಿಪಿಐ (ಎಂ) ಕಾರ್ಯಕರ್ತರ ದಾಳಿ ಎಂದು ಬಿಜೆಪಿಯ ಆರೋಪ

ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರಕಾರ ಅಧಿಕಾರದಲ್ಲಿರುವವರೆಗೂ ಇಂತಹ ದಾಳಿಗಳು ಮುಂದುವರಿಯುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಹಿಂದೂಗಳು ಮತಪೆಟ್ಟಿಗೆಗಳ ಮೂಲಕ ಕಮ್ಯುನಿಸ್ಟ್ ಸರಕಾರಕ್ಕೆ ಅವರ ಸ್ಥಾನವನ್ನು ತೋರಿಸುವುದು ಅಪೇಕ್ಷಿತವಾಗಿದೆ !

ಅಂಬಲಪ್ಪುಳಾ (ಕೇರಳ) – ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನುಪ ಆಂಟನಿ ಅವರ ಮೇಲೆ ಹಲ್ಲೆ ನಡೆದಿದೆ. ಈ ದಾಳಿಯ ಹಿಂದೆ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಇದ್ದಾರೆ ಎಂದು ಬಿಜೆಪಿ ಆರೋಪಿಸಿದರೆ, ಆದರೆ ಸಿಪಿಐ (ಎಂ) ಆರೋಪಗಳನ್ನು ತಳ್ಳಿ ಹಾಕಿದೆ. ಆಂಟನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.