ಬಾಂಗ್ಲಾದೇಶದ ಹಿಂದೂಗಳ ಗ್ರಾಮದ ಮೇಲೆ ಮತಾಂಧರಿಂದ ದಾಳಿ : ೮೦ ಮನೆಗಳ ಧ್ವಂಸ

* ಕಥಿತ ಅಕ್ಷೆಪಾರ್ಹ ಫೇಸ್‌ಬುಕ್ ಪೋಸ್ಟ್‌ನಿಂದಾಗಿ ದಾಳಿ

* ಕೇಂದ್ರ ಸರಕಾರ ವಿದೇಶದಲ್ಲಿ ವಿಶೇಷವಾಗಿ ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ರಕ್ಷಣೆಗಾಗಿ ಯಾವಾಗ ಕ್ರಮ ತೆಗೆದುಕೊಳ್ಳುತ್ತದೆ ?

* ದೇಶದಲ್ಲಿ ಪ್ರತಿದಿನ ಹಿಂದೂಗಳ ಧರ್ಮ, ದೇವತೆಗಳು, ಗ್ರಂಥಗಳು ಇತ್ಯಾದಿಗಳನ್ನು ಮತಾಂಧರು ಅವಮಾನಿಸುತ್ತಿರುವಾಗ ಹಿಂದೂಗಳು ಎಂದಿಗೂ ಅಂತಹ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಕಾನೂನನ್ನು ಮುರಿಯುವುದಿಲ್ಲ; ಆದರೆ ಮತಾಂಧರು ಜಗತ್ತಿನಲ್ಲಿ ಎಲ್ಲಿಯಾದರೂ ತಮ್ಮ ಧರ್ಮಕ್ಕೆ ವಿರುದ್ಧವಾಗಿ ಏನಾದರೂ ಸಂಭವಿಸಿದಲ್ಲಿ, ಅವರು ನೇರವಾಗಿ ಕಾನೂನನ್ನು ಕೈಗೆತ್ತಿ ಹಿಂಸಾಚಾರವನ್ನು ಮಾಡುತ್ತಾರೆ, ಇದು ಮತ್ತೊಮ್ಮೆ ಕಂಡುಬರುತ್ತದೆ !

* ಸಾಮಾಜಿಕ ಮಾಧ್ಯಮದಿಂದ ಹಿಂದೂಗಳಿಂದ ಇಸ್ಲಾಂ ಧರ್ಮದ ಬಗ್ಗೆ ಆಕ್ರಮಣಕಾರಿ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಾ ಹಿಂದೂಗಳ ಮೇಲೆ ಹಲ್ಲೆ ನಡೆಸಲು ಮತಾಂಧರ ಹೊಸ ಜಿಹಾದ್ ಆಗಿದೆಯೇ ?

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಉಪಜಿಲ್ಲೆ ಶಾಲ್ಲಾದಲ್ಲಿಯ ಸುಮಾನಗಂಜನಲ್ಲಿನ ಹಿಂದೂಗಳ ನೌಗಾವ ಈ ಗ್ರಾಮದ ಮೇಲೆ ಮಾರ್ಚ್ ೧೭ ರಂದು ಹಿಫಾಜತ್-ಎ-ಇಸ್ಲಾಂ ಈ ಸಂಘಟನೆಯ ಸಾವಿರಾರು ಮತಾಂಧರು ದಾಳಿ ನಡೆಸಿ ೮೦ ಹಿಂದೂಗಳ ಮನೆಗಳನ್ನು ಧ್ವಂಸಗೊಳಿಸಿದರು. ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಗ್ರಾಮದಲ್ಲಿ ದೊಡ್ಡ ಪೊಲೀಸ್ ಪಡೆಯೊಂದನ್ನು ನಿಯೋಜಿಸಲಾಗಿದೆ.

೧. ಮಾರ್ಚ್ ೧೫ ರಂದು ದೆರಾಯಿ ಉಪ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಹಿಫಾಜತ್-ಎ-ಇಸ್ಲಾಂ ಸಂಘಟನೆಯ ಅಮೀರ ಅಲ್ಲಾಮಾ ಜುನೈದ್ ಬಾಬುನಾಗುರೈ, ವ್ಯವಸ್ಥಾಪಕ ಜಂಟಿ ಕಾರ್ಯದರ್ಶಿ ಮೌಲಾನಾ ಮುಫ್ತಿ ಮಾಮುನುಲ್ ಹಕ್ ಮತ್ತು ಸಂಘಟನೆಯ ಇತರ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಮಾಮುನುಲ್ ಹಕ್ ಅವರು ತಮ್ಮ ಭಾಷಣದಲ್ಲಿ ನೌಗಾಂವ್‌ನ ಹಿಂದೂ ಯುವಕರೊಬ್ಬನು ಫೇಸ್‌ಬುಕ್‌ನಲ್ಲಿ ಮಾಡಿದ ಆಪಾದಿತ ಪೋಸ್ಟ್ ಅನ್ನು ಉಲ್ಲೇಖಿಸಿ, ‘ಅವನು ನನ್ನನ್ನು ಟೀಕಿಸಿದ್ದಾನೆ’, ಎಂದು ಹೇಳಿದ್ದರು.

೨. ಈ ಭಾಷಣದ ಮಾರನೇ ದಿನ, ಹಿಫಜತ್‌ನ ಸ್ಥಳೀಯ ಮುಖಂಡರು ಸುಮಾನಗಂಜನಲ್ಲಿ ಆಂದೋಲನವನ್ನು ಮಾಡಿ ಹಿಂದೂಗಳು ಮಾಡಿದ ಪೋಸ್ಟಅನ್ನು ನಿಷೇಧಿಸಲು ಪ್ರಾರಂಭಿಸಿದರು. ಇದರ ನಂತರ ಮಾರ್ಚ್ ೧೭ ರ ಬೆಳಿಗ್ಗೆ ಕಾಶಿಪುರ, ನಾಚಿನ್, ಚಂದಿಪುರ ಮತ್ತು ಇತರ ಪ್ರದೇಶಗಳ ಮತಾಂಧರು ನೌಗಾಂವ್ ಗ್ರಾಮದ ಮೇಲೆ ದಾಳಿ ನಡೆಸಿ ಹಿಂದೂಗಳ ಮನೆಗಳನ್ನು ಧ್ವಂಸ ಮಾಡಿದರು.

೩. ‘ಢಾಕಾ ಟ್ರಿಬ್ಯೂನ್’ ನೀಡಿದ ವರದಿಯ ಪ್ರಕಾರ, ಈ ಗ್ರಾಮದ ಅನೇಕ ಹಿಂದೂ ಕುಟುಂಬಗಳು ತಮ್ಮ ಪ್ರಾಣ ಉಳಿಸಲು ಗ್ರಾಮವನ್ನು ತೊರೆದಿದ್ದಾರೆ. ಅನೇಕ ಹಿಂದೂಗಳು ಗ್ರಾಮವನ್ನು ತೊರೆದ ನಂತರ, ಹಿಫಜತ್-ಎ-ಇಸ್ಲಾಂ ಬೆಂಬಲಿಗರು ಗ್ರಾಮದ ಅನೇಕ ಮನೆಗಳಿಂದ ವಸ್ತುಗಳನ್ನು ಕದ್ದಿದ್ದಾರೆ.

. ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಕೂಡ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅವರು ‘ಬಾಂಗ್ಲಾದೇಶದ ಇಸ್ಲಾಂನ ಸೈನಿಕರು ಸುಮಾನಗಂಜವುನಲ್ಲಿ ಒಂದು ಹಿಂದೂಗಳು ವಾಸವಾಗಿರುವ ಗ್ರಾಮವನ್ನು ನೆಲಸಮ ಮಾಡಿದ್ದಾರೆ’ ಬಾಂಗ್ಲಾದೇಶದಲ್ಲಿ ಇದು ಸಂಭವಿಸುವುದು ಸಾಮಾನ್ಯ ಸಂಗತಿಯಲ್ಲ’ ಎಂದು ಅವರು ಮತಾಂಧ ದಾಳಿಕೋರರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.