ಕೇರಳದ ಕೊಡಂಗಲ್ಲೂರಿನ ಭದ್ರಾಕಳಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳನ್ನು ಆಡಳಿತ ನಿಷೇಧಿಸಿದೆ!

ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ಅವಧಿಯಲ್ಲಿ ಹಿಂದೂಗಳ ಧಾರ್ಮಿಕ ವಿಧಿಗಳನ್ನು ನಿಷೇಧಿಸುವುದು ಹಿಂದೂ ದ್ವೇಷವೇ ಆಗುತ್ತದೆ ! ಕಮ್ಯುನಿಸ್ಟ್ ಸರಕಾರವು ಇತರ ಧರ್ಮಗಳ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸುವ ಧೈರ್ಯ ಮಾಡುತ್ತದೆಯೇ ?

ತ್ರಿಶೂರ್ (ಕೇರಳ) – ಕೇರಳ ಸರಕಾರವು ಕೊರೋನಾ ಮಹಾಮಾರಿಯ ಕಾರಣವನ್ನು ನೀಡುತ್ತಾ ರಾಜ್ಯದ ಕೊಡಂಗಲ್ಲೂರಿನ ಭದ್ರಾಕಳಿ ದೇವಸ್ಥಾನದಲ್ಲಿ ಹಿಂದೂ ಭಕ್ತರ ದೀರ್ಘಕಾಲದಿಂದ ಆಚರಣೆಯಲ್ಲಿರುವ ಧಾರ್ಮಿಕ ವಿಧಿಯನ್ನು ನಿಷೇಧಿಸಿದೆ. ಭಕ್ತರಿಗೆ ವಿಧಿ ಮಾಡಲು ಸಾಧ್ಯವಾಗಬಾರದು; ಅದಕ್ಕಾಗಿಯೇ ಪೊಲೀಸರನ್ನು ನಿಯೋಜಿಸಲಾಗಿದೆ. ಧಾರ್ಮಿಕ ವಿಧಿಗಳನ್ನು ನಿಷೇಧಿಸುವ ನಿರ್ಧಾರವನ್ನು ಹಿಂದೂ ಭಕ್ತರೊಂದಿಗೆ ಸಮಾಲೋಚಿಸದೆ ದೇವಾಲಯದ ಆಡಳಿತ ಮತ್ತು ಸರಕಾರಿ ನೌಕರರು ಸ್ವ-ಇಚ್ಛೆಯಿಂದ ತೆಗೆದುಕೊಂಡಿದ್ದಾರೆ.

೧. ಭದ್ರಾಕಳಿ ದೇವಸ್ಥಾನವು ಮೂಲತಃ ಒಂದು ಶಿವನ ದೇವಾಲಯವಾಗಿತ್ತು. ಭಗವಾನ ಪರಶುರಾಮ ಸ್ವತಃ ಶಿವನ ಬಳಿ ಕಾಳಿ ದೇವಿಯ ವಿಗ್ರಹವನ್ನು ಸ್ಥಾಪಿಸಿದ್ದಾರೆಂದು ನಂಬಲಾಗಿದೆ. ಇದು ಚೆರ್ ರಾಜವಂಶದ ರಾಜರ ಆಳ್ವಿಕೆಯಲ್ಲಿ ಒಂದು ಪ್ರಮುಖ ದೇವಾಲಯವಾಗಿತ್ತು ಮತ್ತು ಕೊಡಂಗಲ್ಲೂರ್ ಅವರ ರಾಜಧಾನಿಯಾಗಿತ್ತು.

೨. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ‘ಮೀನಾ ಭರಣಿ’ ಹಬ್ಬದ ಸಂದರ್ಭದಲ್ಲಿ, ದೈವಿ ಸಂಚಾರವಾಗುವ ಮಂಡಳಿಯ ಜನರು ಕೊಡಂಗಲ್ಲೂರಿನ ಶ್ರೀ ಕುರುಂಬಾ ಭಗವತಿ ದೇವಸ್ಥಾನಕ್ಕೆ ಹೋಗುತ್ತಾರೆ. ಅವರು ಅವರ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಾರೆ ಹಾಗೂ ಅವರ ದೇಹದಲ್ಲಿ ದೈವಿಯ ಸಂಚಾರ ಆದ ತಕ್ಷಣ ಅವರು ಹಣೆಯ ಮೇಲೆ ಇಳಿಗೆಯ ಆಕಾರದ ಆಯುಧದಿಂದ ಹೊಡೆದುಕೊಳ್ಳುತ್ತಾರೆ. ಅವರ ಗಾಯದ ಮೇಲೆ ಅರಿಶಿನ ಪುಡಿಯನ್ನು ಹಚ್ಚುವುದರಿಂದ ಗಾಯಗಳು ಗುಣವಾಗುತ್ತವೆ. ‘ದೈವಿಯ ಕೃಪೆಯಿಂದ ಗಾಯಗಳು ಗುಣವಾಗುತ್ತದೆ’ ಎಂದು ಅವರ ಶ್ರದ್ಧೆಯಾಗಿದೆ.

೩. ‘ರಿಕ್ಲೆಮ ಟೆಂಪಲ್ಸ್’ ಈ ಹಿಂದೂ ಸಂಘಟನೆಯ ಪ್ರಕಾರ, ಜಿಲ್ಲಾಧಿಕಾರಿ ಶಾನವಾಸ್ ಇವರು ಈ ಧಾರ್ಮಿಕ ವಿಧಿಗಳನ್ನು ನಿಷೇಧಿಸಿದ್ದಾರೆ. (ಇಂತಹ ಅಧಿಕಾರಿಗಳು ಭಾರತದವರೋ ಅಥವಾ ಪಾಕಿಸ್ತಾನದವರೋ ? – ಸಂಪಾದಕ) ದೇವಸ್ಥಾನದಲ್ಲಿ ಭಕ್ತರು ಹಾಗೂ ಮೈಮೇಲೆ ದೈವಿ ಸಂಚಾರವಾಗುವ ಮಂಡಳಿಗೆ ಯಾವುದೇ ಅನುಷ್ಠಾನ ಮಾಡಲು ಬರಬಾರದು, ಅದಕಕ್ಕಾಗಿ ಜಿಲ್ಲಾಡಳಿತದಿಂದ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಲಾಗಿತ್ತು. (ಮತಾಂಧರಲ್ಲಿ ಭಯ ನಿರ್ಮಿಸಲು ಈ ರೀತಿಯಲ್ಲಿ ಎಂದಾದರೂ ಮಾಡಲಾಗಿದೆಯೇ ? – ಸಂಪಾದಕ)

೪. ಸ್ಥಳೀಯ ಹೋಟೆಲ್‌ಗಳಲ್ಲಿ ಭಕ್ತರಿಗೆ ಕೊಠಡಿಗಳನ್ನು ಬಾಡಿಗೆಗೆ ಕೊಡದಂತೆ ಪೊಲೀಸರು ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ನಗರವನ್ನು ಪ್ರವೇಶಿಸುವ ವಾಹನಗಳನ್ನು ಸಹ ಪೊಲೀಸರು ತಡೆದು ವಾಪಸ್ ಕಳುಹಿಸಿದರು. ದೇವಾಲಯದ ಸುತ್ತ ಯಾವುದೇ ಅಂಗಡಿಗಳನ್ನು ತೆಗೆಯಲು ಅನುಮತಿ ಇಲ್ಲ. ಕೇರಳ ಪೊಲೀಸರು ಇಡೀ ನಗರದ ಮೇಲೆ ಹಿಡಿತ ಸಾಧಿಸಿದ್ದಾರೆ ಮತ್ತು ಅತಿಥಿಗಳನ್ನೂ ತಮ್ಮ ಮನೆಗಳಲ್ಲಿ ಉಳಿಯಲು ಅವಕಾಶ ನೀಡದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.

೫. ಇತ್ತೀಚೆಗೆ, ಭದ್ರಾಕಳಿ ದೇವಿಗೆ ಪ್ರಾಣಿ ಬಲಿ ಸೇರಿದಂತೆ ಇತರ ಪರಂಪರೆಗಳು, ಪ್ರಾಣಿಗಳ ಹಕ್ಕುಗಳು ಮತ್ತು ಧಾರ್ಮಿಕ ವಿಷಯಗಳಲ್ಲಿ ಕಾಲಾನುಸಾರ ಸುಧಾರಣೆಗಳ ವರದಿಯನ್ನು ನೀಡಿ ನಿಲ್ಲಿಸಲಾಗಿದೆ. (ಕೇರಳದಲ್ಲಿ ಹಿಂದೂ ಧಾರ್ಮಿಕ ಪರಂಪರೆಗಳನ್ನು ಹೇಗೆ ಮುರಿಯಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇದನ್ನು ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆ ಅಗತ್ಯವಾಗಿದೆ ! – ಸಂಪಾದಕ)