ಅಜಾನ್ ವಿರುದ್ಧ ಅಲಹಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿಯಿಂದ ಜಿಲ್ಲಾಧಿಕಾರಿಗೆ ದೂರು !

* ಈ ಬಗ್ಗೆ ಸಾರ್ವಜನಿಕರ ದೂರುಗಳನ್ನು ನಿರ್ಲಕ್ಷಿಸುವ ಪೊಲೀಸರು, ಕನಿಷ್ಠ ಪಕ್ಷ ಉಪಕುಲಪತಿಯ ದೂರಿನ ಬಗ್ಗೆ ಗಮನ ಹರಿಸುವರು, ಎಂಬ ಅಪೇಕ್ಷೆ !

* ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಅಜಾನದಿಂದಾಗಿ ಜನರು ತೊಂದರೆ ಅನುಭವಿಸಬಾರದು ಎಂದು ಹಿಂದೂಗಳ ಅಪೇಕ್ಷೆಯಗಿದೆ !

( ಸೌಜನ್ಯ: ಆಜ್ ತಕ್ )

ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿಯ ಅಲಹಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾ. ಸಂಗೀತಾ ಶ್ರೀವಾಸ್ತವ ಇವರು ಮಸೀದಿಗಳ ಧ್ವನಿವರ್ಧಕದಿಂದ ಬೆಳಗ್ಗೆ ನೀಡುವ ಆಜಾನ್‌ನಿಂದ ನಿದ್ರೆ ಭಂಗ ಆಗುತ್ತದೆ, ಎಂದು ದೂರಿ ಜಿಲ್ಲಾ ಕಲೆಕ್ಟರ್ ಭಾನುಚಂದ್ರ ಗೋಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಪ್ರಾ. ಶ್ರೀವಾಸ್ತವ ಇವರು ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಶ್ರೀವಾಸ್ತವ ಅವರು ಪತ್ರದ ಪ್ರತಿಯನ್ನು ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಶ್ರೀವಾಸ್ತವ ಅವರಿಂದ ಪತ್ರ ಬಂದಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಸರ್ವಶ್ರೇಷ್ಠ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ ಭಾನುಚಂದ್ರ ಗೋಸ್ವಾಮಿ ಕೂಡ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ, ಗಾಯಕ ಸೋನು ನಿಗಮ್ ಅವರು ಮಸೀದಿಯ ಧ್ವನಿವರ್ಧಕದಿಂದ ಬೆಳಿಗ್ಗೆ ನೀಡಲಾಗುವ ಆಜಾನ್‌ನಿಂದ ನಿದ್ರೆ ಭಂಗ ಆಗುತ್ತದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ ದೂರು ನೀಡಿದ್ದರು.

ಪ್ರಾ. ಶ್ರೀವಾಸ್ತವ ಈ ಪತ್ರದಲ್ಲಿ,

. ಪ್ರತಿದಿನ ಬೆಳಗ್ಗೆ ೫.೩೦ ಕ್ಕೆ ಅಜಾನ್ ನಡೆಯುತ್ತದೆ. (ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ಬೆಳಗ್ಗೆ ೬ ಗಂಟೆಯ ಮೊದಲು ಧ್ವನಿವರ್ಧಕಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಬೆಳಗ್ಗೆ ೫.೩೦ ಕ್ಕೆ ಧ್ವನಿವರ್ಧಕದಿಂದ ಆಜಾನ ಹೇಗೆ ಆಗುತ್ತದೆ ಹಾಗೂ ಸ್ಥಳೀಯ ಪೊಲೀಸರು ಕಿವುಡರಾಗಿದ್ದಾರೋ ಅಥವಾ ಅವರ ಗಮನಕ್ಕೆ ಬರುವುದಿಲ್ಲವೋ ? ಅಥವಾ ಅವರು ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾರೆಯೇ ? ಇದರ ಬಗ್ಗೆಯೂ ತನಿಖೆ ನಡೆಸಬೇಕು ! – ಸಂಪಾದಕರು) ಧ್ವನಿವರ್ಧಕದಿಂದ ಆಗುವ ಆಜಾನ್‌ನಿಂದಾಗಿ ನಿದ್ರೆ ಭಂಗ ಆಗುತ್ತದೆ. ಅದರ ನಂತರ, ಅನೇಕ ಪ್ರಯತ್ನಗಳ ಹೊರತಾಗಿಯೂ ನಿದ್ರೆ ಬರುವುದಿಲ್ಲ. ಇದರಿಂದ ದಿನವಿಡೀ ತಲೆನೋವು ಉಂಟಾಗುತ್ತದೆ. ಇದು ದಿನನಿತ್ಯದ ಕೆಲಸಗಳ ಮೇಲೂ ಪರಿಣಾಮ ಬೀರುತ್ತಿದೆ.

. ನಾನು ಯಾವುದೇ ಪಂಥ ಅಥವಾ ಜಾತಿಗೆ ವಿರೋಧಿಯಲ್ಲ. ನೀವು ಧ್ವನಿವರ್ಧಕವಿಲ್ಲದೆ ಇದನ್ನು ಮಾಡಬಹುದು. ಇದರಿಂದ ಇತರರ ದಿನಚರಿಯ ಮೇಲೆ ಪರಿಣಾಮ ಬೀರುವುದಿಲ್ಲ.

೩. ಮುಂಬರುವ ಈದ್‌ಗೆ ಮುಂಚಿತವಾಗಿ, ‘ಸಹರಿ”ಯ (ರಂಜಾನ್ ಸಮಯದಲ್ಲಿ ಬೆಳಗ್ಗೆ ಮಾಡಬೇಕಾದ ಊಟ) ಘೋಷಣೆ ಬೆಳಗ್ಗೆ ೪ ಗಂಟೆಯ ಮೊದಲೇ ಆಗುತ್ತದೆ. ಅದು ಅವರ ಮತ್ತಿತರರ ತೊಂದರೆಗಳನ್ನು ಹೆಚ್ಚಿಸುತ್ತದೆ. ಭಾರತೀಯ ಸಂವಿಧಾನದಲ್ಲಿ ಜಾತ್ಯತೀತ ಮತ್ತು ಶಾಂತಿಯುತ ಸಾಮರಸ್ಯದ ಪರಿಕಲ್ಪನೆಯನ್ನು ಪ್ರತಿಪಾದಿಸಲಾಗಿದೆ.