ಶ್ರೀನಗರದಲ್ಲಿ ಕೃಷ್ಣ ಢಾಬಾ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಹಿಂದೂ ಯುವಕನೊಬ್ಬ ಚಿಕಿತ್ಸೆ ಪಡೆಯುವಾಗ ಮೃತ್ಯು

  • ಸಾಮಾಜಿಕ ಮಾಧ್ಯಮಗಳ ಮೂಲಕ ಢೋಂಗಿ ಜಾತ್ಯತೀತವಾದಿಗಳ ಮೇಲೆ ಟೀಕೆ
  • ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತರಾಗಿದ್ದಾರೆ. ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ !

ನವ ದೆಹಲಿ : ಶ್ರೀನಗರದ ಪ್ರಸಿದ್ಧ ಕೃಷ್ಣ ಢಾಬಾ ಅಂಗಡಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರೆ, ಅಂಗಡಿ ಮಾಲೀಕರ ಮಗ ಆಕಾಶ ಮೆಹ್ತಾ ಗಂಭೀರವಾಗಿ ಗಾಯಗೊಂಡಿದ್ದನು. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅಸುನೀಗಿದನು. ಅನಂತರ ಹಿಂದೂಪರ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಈ ಕೃತ್ಯವನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ‘ಕೃಷ್ಣ ಢಾಬಾ’ ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗಿತ್ತು.

. ಒಬ್ಬರು ಟ್ವಿಟ್ಟರ್‌ನಲ್ಲಿ ‘ಭಾರತದಲ್ಲಿ ಹಿಂದೂ ಆಗಿರುವುದು ಅಪರಾಧವೇ?’ ‘ಈಗ ತಥಾಕಥಿತ ಜಾತ್ಯತೀತ ನಾಯಕರು ಮತ್ತು ಪ್ರಶಸ್ತಿ ಹಿಂದಿರುಗಿಸುವ ಗುಂಪು ಎಲ್ಲಿ ಹೋಗಿವೆ?’ ‘ಹಿಂದೂಗಳು ಕೊಲ್ಲಲ್ಪಟ್ಟಾಗ ಜಾತ್ಯತೀತತೆಯ ಕೊಲೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಇಸ್ಲಾಮಿಕ್ ಭಯೋತ್ಪಾದನೆಯು ಓರ್ವ ಪ್ರಬಲ ಹಿಂದೂ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಬರೆದಿದ್ದಾರೆ.

. ಮುಸ್ಲಿಂ ಜಂಬಾಜ್ ಫೋರ್ಸ್ ಎಂಬ ಉಗ್ರಗಾಮಿ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಪೊಲೀಸರು ಈ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಲಷ್ಕರ್-ಎ-ತೋಯಿಬಾ ಗುಂಪಿನೊಂದಿಗೆ ನಂಟಿದೆ.