೧೨ ಜ್ಯೋತಿರ್ಲಿಂಗಗಳು

ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾಗಿವೆ. ಹದಿಮೂರನೆಯ ಲಿಂಗಕ್ಕೆ ಕಾಲಪಿಂಡವೆನ್ನುತ್ತಾರೆ. ಕಾಲದ ಆಚೆಗೆ ಹೋಗಿರುವ ಪಿಂಡ ವೆಂದರೆ (ದೇಹವೆಂದರೆ) ಕಾಲಪಿಂಡ. ಹನ್ನೆರಡು ಜ್ಯೋತಿರ್ಲಿಂಗಗಳು ಮುಂದಿನಂತಿವೆ.

ಮಧ್ಯಪ್ರದೇಶ: ಮಹಾಕಾಳ, ಓಂಕಾರ/ ಅಮಲೇಶ್ವರ

ಆಂಧ್ರಪ್ರದೇಶ: ಮಲ್ಲಿಕಾರ್ಜುನ

ಮಹಾರಾಷ್ಟ್ರ: ಭೀಮಾಶಂಕರ, ತ್ರ್ಯಂಬಕೇಶ್ವರ, ವೈದ್ಯನಾಥ (ವೈಜನಾಥ), ನಾಗೇಶ (ನಾಗನಾಥ), ಘೃಷ್ಣೇಶ್ವರ (ಘೃಷ್ಮೇಶ)

ಗುಜರಾತ: ಸೋಮನಾಥ

ಹಿಮಾಲಯ: ಕೇದಾರನಾಥ

ಉತ್ತರಪ್ರದೇಶ: ವಿಶ್ವೇಶ್ವರ

ತಮಿಳುನಾಡು: ರಾಮೇಶ್ವರ

ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠ್ಮಂಡು (ನೇಪಾಳ)ದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ಶಿರವಾಗಿದೆ.

ಜ್ಯೋತಿರ್ಲಿಂಗದ ಅರ್ಥ

. ವ್ಯಾಪಕ ಬ್ರಹ್ಮಾತ್ಮಲಿಂಗ ಅಥವಾ ವ್ಯಾಪಕ ಪ್ರಕಾಶ

. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚ ಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ.

. ಶಿವಲಿಂಗದ ಹನ್ನೆರಡು ಖಂಡಗಳು

೪. ಯಜ್ಞಶಿಖೆ ಪಾಣಿಪೀಠ ಇದು ಯಜ್ಞ ವೇದಿಕೆಯ ಪ್ರತೀಕವಾಗಿದ್ದು ಮತ್ತು ಲಿಂಗ ಇದು ಯಜ್ಞದ ಪ್ರತೀಕವಾಗಿರುವ ಜ್ಯೋತಿಯ ಅಂದರೆ ಯಜ್ಞ ಶಿಖೆಯ ಪ್ರತೀಕವಾಗಿದೆ.

. ದ್ವಾದಶ ಆದಿತ್ಯದ ಪ್ರತೀಕಗಳು

೬. ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕ ಸ್ಥಾನಗಳು

ದಕ್ಷಿಣ ದಿಕ್ಕಿನ ಸ್ವಾಮಿಯಾದ ಯಮನು ಶಂಕರನ ಅಧಿಪತ್ಯದಲ್ಲಿರುವುದರಿಂದ ದಕ್ಷಿಣವು ಶಂಕರನ ದಿಕ್ಕಾಗುತ್ತದೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖಿಯಾಗಿರುತ್ತವೆ ಅಂದರೆ ಜ್ಯೋತಿರ್ಲಿಂಗಗಳ ಪಾಣಿಪೀಠದ ಹರಿನಾಳವು (ಅಭಿಷೇಕದ ನೀರು ಹೋಗುವ ದಾರಿ) ದಕ್ಷಿಣ ದಿಕ್ಕಿನಲ್ಲಿರುತ್ತದೆ.

ಹೆಚ್ಚಿನ ದೇವಸ್ಥಾನಗಳು ದಕ್ಷಿಣಾಭಿಮುಖ ವಿರುವುದಿಲ್ಲ. ಪಾಣಿಪೀಠವು ದಕ್ಷಿಣಾಭಿಮುಖವಾಗಿದ್ದರೆ (ಅಭಿಷೇಕದ ನೀರು ದಕ್ಷಿಣ ದಿಕ್ಕಿಗೆ ಹೋಗುತ್ತಿದ್ದರೆ) ಆ ಲಿಂಗವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹರಿನಾಳವು ಉತ್ತರ ದಿಕ್ಕಿನಲ್ಲಿದ್ದರೆ (ಅಭಿಷೇಕದ ನೀರು ಉತ್ತರ ದಿಕ್ಕಿಗೆ ಹೋಗುತ್ತಿದ್ದರೆ)  ಆ ಲಿಂಗವು ಕಡಿಮೆ ಶಕ್ತಿಶಾಲಿಯಾಗಿರುತ್ತದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ `ಶಿವನ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿವೇಚನೆ’)