ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿನ ಚೈತನ್ಯ ಸ್ರೋತದ ಪ್ರವಾಹ ಹಾಗೂ ಅದರಿಂದ ನಿರ್ಮಾಣವಾಗುವ ಪರಿಣಾಮ !

ಮಹಾರಾಷ್ಟ್ರದ ಪ್ರಸಿದ್ಧ ಶ್ರೀ ಕ್ಷೇತ್ರವಾಗಿರುವ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಮಹಿಳೆಯರು ಗರ್ಭಗುಡಿ ಪ್ರವೇಶಿಸುವ ಬಗ್ಗೆ ವಾದ ನಿರ್ಮಾಣವಾಗಿತ್ತು. ಆ ನಿಮಿತ್ತ ಅಲ್ಲಿನ ಚೈತನ್ಯದ ಸ್ರೋತ ಮತ್ತು ಅದರಿಂದ ನಿರ್ಮಾಣವಾಗುವ ಪರಿಣಾಮದ ಮಾಹಿತಿ ಇಲ್ಲಿ ನೀಡಲಾಗಿದೆ.

೧. ತ್ರ್ಯಂಬಕೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಿರ್ಮಾಣವಾಗುವ, ಚೈತನ್ಯಸ್ರೋತವನ್ನು ಸಹಿಸಿಕೊಳ್ಳುವ ಶಕ್ತಿ ಯಾರ ಶರೀರದಲ್ಲಿದೆಯೋ ಅಂತಹವರಿಗೆ ಮಾತ್ರ ಗರ್ಭಗುಡಿಯೊಳಗೆ ಪ್ರವೇಶ ನೀಡಲಾಗುತ್ತದೆ. ತ್ರ್ಯಂಬಕೇಶ್ವರದಲ್ಲಿ ಶುಕ್ಲ, ಪಾಟಣಕರ್, ದೀಕ್ಷಿತ್ ಮುಂತಾದ ನಿರ್ದಿಷ್ಟ ಪುರೋಹಿತರೇ ನಿಗದಿತ ಅವಧಿಯಲ್ಲಿ ಪೂಜೆ-ಪುನಸ್ಕಾರ ಮಾಡುತ್ತಾರೆ. ಅವರನ್ನು ಹೊರತುಪಡಿಸಿ, ಗರ್ಭಗುಡಿಯೊಳಗೆ ಹೋಗಿ ಪೂಜೆ ಮಾಡಲು ಯಾವ ಹುಡುಗರು ಪ್ರಯತ್ನಿಸಿದರೋ, ಅವರ ಮೈಮೇಲೆ ಅನಿರೀಕ್ಷಿತವಾಗಿ ಬಿಳಿ ಬಣ್ಣದ ಕಲೆಗಳು ಆಗಿರುವುದು ಕಂಡುಬಂದಿತು. ಇದರ ವೈಜ್ಞಾನಿಕ ಕಾರಣವೇನೆಂದರೆ, ಜ್ವಾಲಾಮುಖಿಯಿಂದ ಉತ್ಪನ್ನವಾಗುವ ಶಾಖದಿಂದ, ಗಾಮಾ, ಅಲ್ಫಾ, ಕ್ಷ-ಕಿರಣ ಹಾಗೂ ಇತರ ಧನಾತ್ಮಕ, ಋಣಾತ್ಮಕ ಮುಂತಾದ ಸೂಕ್ಷ್ಮ ವಿದ್ಯುತ್ ಕಣಗಳ ಪ್ರಕ್ಷೇಪಣೆಯಾಗುವಂತೆಯೇ, ಜ್ಯೋತಿರ್ಲಿಂಗದಿಂದಲೂ ಪ್ರಕ್ಷೇಪಣೆಯಾಗುತ್ತದೆ. ತ್ರ್ಯಂಬಕೇಶ್ವರದಲ್ಲಿ ಇದು ಘಟಿಸುತ್ತದೆ; ಆದುದರಿಂದ ಇಲ್ಲಿಯವರೆಗೆ ಕೆಲವೊಮ್ಮೆ ಮೂರು ದಿನ, ಏಳು ದಿನ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಮುಚ್ಚಲಾಗುತ್ತದೆಯೆಂದು ಅಲ್ಲಿನ ಹಿರಿಯ ಪುರೋಹಿತರು ತಿಳಿಸಿದರು.

೨. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಎಲ್ಲೆಲ್ಲಿ ಜ್ವಾಲಾಮುಖಿ ಉಲ್ಬಣಗೊಂಡಿದೆಯೋ, ಆ ಸ್ಥಳಗಳಲ್ಲಿ ಜ್ಯೋತಿರ್ಲಿಂಗಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದವರು ಹೇಳಿದರು. ನಿರ್ದಿಷ್ಠವಾದ ದಿನ, ನಿರ್ದಿಷ್ಠ ಸಮಯದಲ್ಲಿ ನೈಸರ್ಗಿಕವಾಗಿ ಜ್ವಾಲಾಮುಖಿಯು ಉಲ್ಬಣಗೊಂಡರೆ, ಅಲ್ಲಿರುವ ಚೈತನ್ಯ, ಶಾಖ, ಸ್ಪಂದನಗಳು ನಿತ್ಯದ ತುಲನೆಗಿಂತ ಅಧಿಕ ಉಷ್ಣತೆಯನ್ನು ನಿರ್ಮಾಣ ಮಾಡುವಂತಹದ್ದಾಗಿರುತ್ತದೆ. ಈ ಸ್ಥಿತಿ ತ್ರ್ಯಂಬಕೇಶ್ವರದ ಜ್ಯೋತಿರ್ಲಿಂಗದ ಸ್ಥಳದಲ್ಲಿ ಕಂಡುಬರುತ್ತದೆ.

೩. ಆಯಾ ಸಂದರ್ಭದಲ್ಲಿ ಪೃಥ್ವಿಯ ಮೇಲೆ, ವಿಶೇಷವಾಗಿ ಭಾರತದ ಮೇಲೆ ಮಾನವ ನಿರ್ಮಿತ ಶಾಖವು ವಾತಾವರಣದ ಮೇಲೆ ಪ್ರಭಾವ ಬೀರಿದಾಗ (ಉದಾ. ಭಾರತ-ಚೀನಾ ಯುದ್ಧ, ಪಾಕಿಸ್ತಾನದ ಜೊತೆಗಿನ ಯುದ್ಧ), ಆಯಾ ಸಮಯದಲ್ಲಿ ಕನಿಷ್ಠ ೧ ದಿನವಾದರೂ ಈ ದೇವಸ್ಥಾನಗಳನ್ನು ಮುಚ್ಚಿಡಬೇಕಾದ ಸಂದರ್ಭ ಎದುರಾಗಿತ್ತು.

೪. ತ್ರ್ಯಂಬಕೇಶ್ವರವು ಶಿವಯೋಗಯುಕ್ತ ಪ್ರಾಚೀನ ಶಿವಯೋಗದಲ್ಲಿ ವರ್ಣಸಿದ ತೀರ್ಥಸ್ಥಳವಾಗಿದೆ. ಇಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಸಂಯೋಗಗೊಂಡ ಜಲಲಿಂಗವಿದೆ. (ಆಧಾರ : ವಿಶ್ವಚೈತನ್ಯದ ವಿಜ್ಞಾನ, ಪೂ. ಡಾ. ರಘುನಾಥ ಶುಕ್ಲ, ಹಿರಿಯ ವಿಜ್ಞಾನಿಗಳು, ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ)