ಕೇರಳದ ಸೈರೋ-ಮಲಬಾರ್ ಚರ್ಚ್‌ನಿಂದ‌ ಕಾಂಗ್ರೆಸ್‌ಗೆ ಎಚ್ಚರಿಕೆ !

ಕ್ರೈಸ್ತ ಬಹುಸಂಖ್ಯಾತ ಚುನಾವಣಾ ಕ್ಷೇತ್ರದಿಂದ ಅಭ್ಯರ್ಥಿಯನ್ನು ನಮ್ಮೊಂದಿಗೆ ಚರ್ಚಿಸದೆ ಆಯ್ಕೆ ಮಾಡಬೇಡಿ!

  • ಕೇರಳದ ಢೋಂಗಿ ಜಾತ್ಯತೀತ ಕಮ್ಯುನಿಸ್ಟರು ಮತ್ತು ದೇಶದ ಪ್ರಗತಿ(ಅಧೋಗತಿ)ಪರರಿಗೆ ‘ಜಾತ್ಯತೀತ ಭಾರತದಲ್ಲಿರುವ’ ಚರ್ಚನ ಈ ಧಾರ್ಮಿಕ ದಾದಾಗಿರಿ ಸಮ್ಮತವೇ ?
  • ಅಂತಹ ಎಚ್ಚರಿಕೆಯನ್ನು ಹಿಂದೂ ಸಂತರು ಅಥವಾ ಧರ್ಮಪೀಠವು ನೀಡಿದ್ದರೆ, ಇದೇ ಜಾತ್ಯತೀತವಾದಿಗಳು ಆಕಾಶಪಾತಾಳ ಒಂದು ಮಾಡುತ್ತಿದ್ದರು!
ಸೈರೋ-ಮಲಬಾರ್ ಚರ್ಚ್

ತಿರುವನಂತಪುರಂ (ಕೇರಳ) – ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚರ್ಚ್‌ದೊಂದಿಗೆ ಚರ್ಚಿಸದೆ ಕ್ರೈಸ್ತ ಬಹುಸಂಖ್ಯಾತ ಚುನಾವಣಾಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯ ಉಮೇದುವಾರಿಕೆ ಅಂತಿಮಗೊಳಿಸಬೇಡಿ ಎಂದು ಕೇರಳದ ಸೈರೋ-ಮಲಬಾರ್ ಚರ್ಚ್ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.

ಚರ್ಚ‌ನ ಅಧಿಕೃತ ಮುಖವಾಣಿಯ ಸಂಪಾದಕೀಯದಲ್ಲಿ, ಆರ್ಚ‌ಬಿಷಪ್ ಮಾರ್ ಜೋಸೆಫ್ ಪೆರುಮ್ತೊಟ್ಟಮ್ ಅವರು ‘ಕಾಂಗ್ರೆಸ್ ಪಕ್ಷವು ಕ್ರೈಸ್ತ ಧರ್ಮದ ಹೊರಗಿನ ಅಭ್ಯರ್ಥಿಗೆ ಉಮೇದುವಾರಿಕೆ ನೀಡಬಾರದು’ ಎಂದು ಹೇಳಿದ್ದಾರೆ, ಎಂಬುದಾಗಿ ಬರೆಯಲಾಗಿದೆ.