ಕೇರಳದಲ್ಲಿ ಸಂಘ ಮತ್ತು ಮತಾಂಧ ರಾಜಕೀಯ ಪಕ್ಷವಾದ ಎಸ್.‌ಡಿ.ಪಿ.ಐ. ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಸ್ವಯಂಸೇವಕನ ಮೃತ್ಯು

ಕೇಂದ್ರ ಸರ್ಕಾರವು ಮತಾಂಧ ರಾಜಕೀಯ ಪಕ್ಷವಾದ ಎಸ್‌.ಡಿ.ಪಿ.ಐ.ಅನ್ನು ನಿಷೇಧಿಸಬೇಕು ಎಂದು ಸಂಘ ಸೇರಿದಂತೆ ಹಿಂದೂ ಕಾರ್ಯಕರ್ತರೆಲ್ಲರೂ ಒತ್ತಾಯಿಸಬೇಕು ಎಂದು ಹಿಂದೂಗಳಿಗೆ ಅನ್ನಿಸುತ್ತದೆ.

ಸ್ವಯಂ ಸೇವಕ ಸಂಘದ ಕಾರ್ಯಕರ್ತ ನಂದು ಕೃಷ್ಣ

ಅಲಪ್ಪುಳಾ (ಕೇರಳ) – ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರ ಮತ್ತು ಮತಾಂಧ ರಾಜಕೀಯ ಪಕ್ಷವಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ನಡುವಿನ ಘರ್ಷಣೆಯಲ್ಲಿ ಸಂಘದ ನಂದು ಎಂಬ ಸ್ವಯಂಸೇವಕರೊಬ್ಬರು ಸಾವನ್ನಪ್ಪಿದ್ದಾರೆ.

ಇಲ್ಲಿನ ಚೆರ್ಥಲಾ ಪ್ರದೇಶದ ಸಮೀಪ ನಾಗಮಕುಲಂಗರ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ಎಸ್.ಡಿ.ಪಿ.ಐ.ನ ಎಂಟು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಜಿಹಾದಿ ಸಂಘಟನೆಯಾದ ಪಿಎಫ್‌ಐನ ರಾಜಕೀಯ ಸಂಘಟನೆ ಎಸ್.ಡಿ.ಪಿ.ಐ.ಯಾಗಿದೆ.

ಈ ಘಟನೆಯ ನಂತರ ಕೇರಳ ಬಿಜೆಪಿ ಪ್ರದೇಶಾಧ್ಯಕ್ಷ ಕೆ. ಸುರೇಂದ್ರನ್ ಈ ಕೊಲೆಗೆ ಪಿ.ಎಫ್.‌ಐ.ಯನ್ನು ದೂಷಿಸಿದ್ದಾರೆ. ಈ ಘಟನೆಯ ವಿರುದ್ಧ ಬಿಜೆಪಿ ಮತ್ತು ಇತರ ಹಿಂದೂಪರ ಸಂಘಟನೆಗಳು ಫೆಬ್ರವರಿ ೨೫ ರಂದು ಬಂದ್‌ಗೆ ಕರೆ ನೀಡಿದ್ದರು.