ಶೀಘ್ರದಲ್ಲೇ ಬಿಜೆಪಿ ಸೇರಲಿರುವ ಶ್ರೀಧರನ್ !
‘ದೇಶದಲ್ಲಿ ‘ಲವ್ ಜಿಹಾದ್’ ಎಂಬುವುದೇ ಇಲ್ಲ’ ಎಂದು ಹೇಳುವವರು ಈಗಲಾದರೂ ಲವ್ ಜಿಹಾದ್ ಇದೆ ಎಂದು ಒಪ್ಪಿಕೊಳ್ಳುತ್ತಾರೆಯೇ ?
ತಿರುವನಂತಪುರಂ (ಕೇರಳ) – ನಾನು ಲವ್ ಜಿಹಾದ್‌ಅನ್ನು ವಿರೋಧಿಸುತ್ತೇನೆ. ಕೇರಳದಲ್ಲಿ ಏನಾಗಿದೆ ಎಂದು ನಾನು ನೋಡಿದ್ದೇನೆ. ಹಿಂದೂ ಹುಡುಗಿಯರು ಹೇಗೆ ಮೋಸ ಹೋಗುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ನಂತರ ಅವರಿಗೆ ಏನಾಗುತ್ತದೆ ಎಂದು ನಾನು ನೋಡಿದ್ದೇನೆ. ಹಿಂದೂ ಮಾತ್ರವಲ್ಲ, ಕ್ರೈಸ್ತ ಹುಡುಗಿಯರನ್ನೂ ಮೋಸಗೊಳಿಸಿ ಅವರ ಮದುವೆ ಮಾಡಿಸಲಾಗುತ್ತದೆ. ಇಂತಹ ಘಟನೆಗಳನ್ನು ತಡೆಗಟ್ಟುವ ಆವಶ್ಯಕತೆಯಿದೆ ಎಂದು ‘ಮೆಟ್ರೋ ಮ್ಯಾನ್’ ಎಂದು ಖ್ಯಾತರಾಗಿರುವ ೮೮ ವರ್ಷದ ಇ. ಶ್ರೀಧರನ್ ಇವರು ಲವ್ ಜಿಹಾದ್ ಬಗ್ಗೆ ಮಾತನಾಡುವಾಗ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಪಕ್ಷ ಬಯಸಿದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದರು. “ನಾನು ಸಕ್ರಿಯ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ರಾಜ್ಯಪಾಲನಾಗಲು ಬಯಸುವುದಿಲ್ಲ” ಎಂದು ಶ್ರೀಧರನ್ ಈಗಾಗಲೇ ಹೇಳಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ. ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ. ಪ್ರಸ್ತುತ ೧೪೦ ಸದಸ್ಯರ ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಕೇವಲ ಒಬ್ಬರು ಶಾಸಕರು ಇದ್ದಾರೆ.
“….Love Jihad, yes, I see what is happened in Kerala. How Hindus are being tricked in a marriage and how they suffer…" 'Metro Man' E Sreedharan saidhttps://t.co/SB3261YgIP
— Hindustan Times (@htTweets) February 20, 2021
ಶ್ರೀಧರನ್ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ‘ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಮುಖ್ಯಮಂತ್ರಿ ನೇರವಾಗಿ ಜನರ ಬಳಿಗೆ ಹೋಗಿ ಅವರೊಂದಿಗೆ ಸಂಪರ್ಕದಲ್ಲಿರುವುದು ಕಡಿಮೆಯಾಗಿದೆ. ಅವರ ಜನಪ್ರಿಯತೆ ಕ್ಷೀಣಿಸಿದೆ. ಮುಖ್ಯಮಂತ್ರಿ ಅವರ ಕೆಲಸಕ್ಕಾಗಿ ೧೦ ರಲ್ಲಿ ೩ ಅಂಕಗಳನ್ನು ಸಹ ನೀಡಲು ಸಾಧ್ಯವಿಲ್ಲ. ಯಾವ ಮಂತ್ರಿಯೂ ತನಗೆ ಬೇಕಾದುದನ್ನು ಮಾಡಲು ಸಾಧ್ಯವಿಲ್ಲ. ಅವರು ನುಡಿಯುವ ಮಾತುಗಳನ್ನು ಸಹ ಹಿಂಪಡೆಯಬೇಕಾಗುತ್ತದೆ ಎಂದು ಅವರು ಹೇಳಿದರು.