‘ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ನಮ್ಮ ೪ ಸೈನಿಕರು ಮೃತಪಟ್ಟರು!’ (ಅಂತೆ)

ಚೀನಾ ಒಪ್ಪಿಕೊಳ್ಳುವಾಗಲೂ ಮತ್ತೊಮ್ಮೆ ನುಡಿದ ಸುಳ್ಳು!

ಈ ಘರ್ಷಣೆಯಲ್ಲಿ ಚೀನಾದ ೪೦ ರಿಂದ ೪೫ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ, ರಷ್ಯಾ ಮತ್ತು ಇತರ ದೇಶಗಳು ತಮ್ಮ ಗುಪ್ತಚರ ವರದಿಯಲ್ಲಿ ಹೇಳುತ್ತಿರುವಾಗ, ನಿನ್ನೆ ತನಕ ಯಾರೂ ಸತ್ತಿಲ್ಲ ಎಂದು ಹೇಳಿಕೊಂಡಿರುವ ಚೀನಾ ಇದು ಒಪ್ಪುವುದೆಂದರೆ ಅಪ್ಪಟ ಸುಳ್ಳುಗಾರಿಕೆ ಎಂದು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ !

ಗಾಲ್ವಾನ್ ಕಣಿವೆ

ಬೀಜಿಂಗ್ (ಚೀನಾ) – ೨೦೨೦ ರ ಜೂನ್ ೧೫ ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಎಂಟು ತಿಂಗಳ ನಂತರ ‘ಒಪ್ಪಿ’ಕೊಂಡಿದೆ. ಘರ್ಷಣೆಯಲ್ಲಿ ಭಾರತೀಯ ಕರ್ನಲ್ ಸೇರಿದಂತೆ ಇಪ್ಪತ್ತು ಸೈನಿಕರು ಸಾವನ್ನಪ್ಪಿದ್ದರು. ಪ್ಯಾಗಾಂಗ್ ಸರೋವರ ಪ್ರದೇಶದಿಂದ ಸೈನ್ಯವನ್ನು ಹಿಂಪಡೆದ ನಂತರ ಚೀನಾ ಇದನ್ನು ಸ್ವೀಕಾರ ಮಾಡಿದೆ. ಚೀನಾ ಈ ನಾಲ್ಕು ಸೈನಿಕರಿಗೆ ಮರಣೋತ್ತರವಾಗಿ ಪದಕಗಳನ್ನು ನೀಡಿ ಗೌರವಿಸಿದೆ ಎಂದೂ ಹೇಳಿದೆ. ಚೀನಾದ ‘ಪೀಪಲ್ಸ್ ಡೈಲಿ’ ಎಂಬ ಸರ್ಕಾರಿ ಮುಖಪತ್ರ ವರದಿ ಮಾಡಿದೆ; ಆದಾಗ್ಯೂ, ಚೀನಾದ ಇನ್ನೊಂದು ಸರಕಾರಿ ಮುಖಪತ್ರ ‘ಗ್ಲೋಬಲ್ ಟೈಮ್ಸ್’ ಐದು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಒಬ್ಬ ನದಿಯಲ್ಲಿ ಕೊಚ್ಚಿಹೋಗಿದ್ದಾನೆಂದು ಹೇಳಿದೆ.