ಭಾರತ ಹಾಗೂ ಅಮೇರಿಕಾಗೆ ಇದರಿಂದ ಅಪಾಯ !
ಚೀನಾವು ಇಸ್ರೇಲ್‌ನಂತಹ ರಾಷ್ಟ್ರಹಿತಕ್ಕಾಗಿ ದಕ್ಷರಾಗಿರುವ ದೇಶದ ಅಭಿಯಂತರಿಂದ ಈ ರೀತಿಯ ತಂತ್ರಜ್ಞಾನವನ್ನು ಕೊಂಡುಕೊಳ್ಳಬಹುದಾದರೆ, ಅದು ಎಷ್ಟು ಧೂರ್ತವೆಂಬುದು ಗಮನಕ್ಕೆ ಬರುತ್ತದೆ. ಚೀನಾವು ಹೆಚ್ಚು ಹೆಚ್ಚು ಅಪಾಯಕಾರಿವಾಗುತ್ತಿರುವಾಗ ಅದನ್ನು ಎದುರಿಸಲು ಹಾಗೂ ಅದಕ್ಕೆ ಒಂದು ಕೈ ತೋರಿಸಲು ಎಲ್ಲಾ ರೀತಿಯಲ್ಲಿಯೂ ತಯಾರಾಗಿರಬೇಕಾಗುವುದು ಅಗತ್ಯ !
ಜೆರುಸಲೇಮ್ (ಇಸ್ರೇಲ್) – ಇಸ್ರೇಲನ್‌ನ ೨೦ ಅಭಿಯಂತರ ವಿರುದ್ಧ ಏಶಿಯಾದ ಒಂದು ದೇಶಕ್ಕೆ ‘ಹಾರೋಪ್ನಂತಹ ವಿಧ್ವಂಸಕ ಡ್ರೋನ್‌ನ ತಂತ್ರಜ್ಞಾನವನ್ನು ಮಾರಾಟ ಮಾಡಿರುವ ಆರೋಪವಿದೆ. ಇಸ್ರೇಲ್ ಆ ದೇಶದ ಹೆಸರು ಹೇಳದಿದ್ದರೂ ತಜ್ಞರ ಅಭಿಪ್ರಾಯದಂತೆ ಆ ದೇಶ ಚೀನಾ ಆಗಿದೆ. ಈ ಹಿಂದೆ ಇಸ್ರೇಲ್ ಮೇಲ್ತನಿಖೆ ಮಾಡಲು ಚೀನಾಗೆ ಈ ಡ್ರೋನ್ ನೀಡುವುದಿತ್ತು; ಆದರೆ ಅಮೇರಿಕಾವು ಈ ವ್ಯವಹಾರವನ್ನು ತಡೆಯಿತು. ಸ್ವತಃ ತನ್ನ ಶಸ್ತ್ರಾಸ್ತ್ರಗಳ ವ್ಯಾಪಾರದ ಮೇಲೆ ಪರಿಣಾಮವಾಗುವುದು ಬೇಡ, ಎಂಬುದಕ್ಕಾಗಿ ಇಸ್ರೇಲ್ ಈ ದೇಶದ ಹೆಸರನ್ನು ಬಹಿರಂಗ ಪಡಿಸಿಲ್ಲ, ಎಂದು ಹೇಳಲಾಗುತ್ತಿದೆ. ಈ ವಾರ್ತೆಯು ಬಹಿರಂಗವಾಗುವ ಮುನ್ನ ೩ ದೇಶಗಳ ಬಳಿ ಈ ಘಾತಕ ಡ್ರೋನ್ ಕ್ಷಿಪಣಿ ನೀಡುವ ಒಪ್ಪಂದ ಪತ್ರ ಮಾಡಿಕೊಳ್ಳುವುದಾಗಿ ಇಸ್ರೇಲ್ ಘೋಷಿಸಿತ್ತು. ಇದರಲ್ಲಿ ಭಾರತವೂ ಒಳಗೊಂಡಿದೆ. ಇಸ್ರೇಲ್‌ನ ವಾರ್ತಾಪತ್ರ ‘ಜೆರುಸಲೇಮ್ ಪೋಸ್ಟ್ಗನುಸಾರ ಭಾರತವು ವರ್ಷ ೨೦೧೯ ರಲ್ಲಿ ಇಸ್ರೇಲ್‌ನಿಂದ ಹಾರೋಪ್ ಡ್ರೋನ್ ಖರೀದಿಸಲು ತೀರ್ಮಾನಿಸಿತ್ತು.
ಒಂದು ವೇಳೆ ಈ ತಂತ್ರಜ್ಞಾನವೇನಾದರೂ ಚೀನಾದ ಕೈ ಸೇರಿದರೆ ಭಾರತ ಹಾಗೂ ಅಮೇರಿಕಾಗೆ ದೊಡ್ಡ ಅಪಾಯ ನಿರ್ಮಾಣವಾಗಬಹುದು. ಈ ತಂತ್ರಜ್ಞಾನವು ಇರಾನ್ ಹಾಗೂ ಉತ್ತರ ಕೊರಿಯಾಗೆ ಹೋಗುವುದು ಬೇಡ, ಎಂಬ ಭಯ ಇಸ್ರೇಲ್‌ಗೆ ಆಗುತ್ತಿದೆ.
ಈ ಹಾರೋಪ್ ಡ್ರೋನ್ ಏನು?
ಕಳೆದ ವರ್ಷ ಅಜರಬೈಝಾನ್ ಹಾಗೂ ಅರ್ಮೇನಿಯಾದ ನಡುವೆ ನಡೆದ ಯುದ್ಧದಲ್ಲಿ ಅಜರಬೈಝಾನ್ ಹಾರೋಪ್ ಡ್ರೋನ್ ಅನ್ನು ಬಳಸಿತ್ತು. ಈ ಡ್ರೋನ್‌ನ ದಾಳಿಯ ಮುಂದೆ ಅರ್ಮೇನಿಯಾದ ಏರ್ ಡಿಫೆನ್ಸ್ ಸಿಸ್ಟಮ್ ಹಾಗೂ ಟ್ಯಾಂಕ್ ವಿಫಲವಾಯಿತು. ಅಜರಬೈಝಾನ್‌ನ ಸೈನ್ಯಕ್ಕೆ ಗೆಲುವಾಗುವುದರಲ್ಲಿ ಹಾರೋಪ್‌ನ ಪಾತ್ರ ದೊಡ್ಡದಾಗಿತ್ತು. ಈ ಡ್ರೋನ್‌ನಲ್ಲಿರುವ ಆಂಟಿ ರಡಾರ್ ಹೋಮಿಂಗ್ ಸಿಸ್ಟಮ್ ಶತ್ರುವಿನ ರಡಾರ್ ಅನ್ನು ಕೂಡ ಪ್ರತಿರೋಧಿಸಬಹುದು. ಈ ಡ್ರೋನ್‌ಗೆ ತನ್ನ ಗುರಿ ಸಿಗದೆ ಹೋದರೆ ಅದು ಪುನಃ ತನ್ನ ನೆಲೆಗೆ ವಾಪಸ್ಸಾಗುತ್ತದೆ ಕೂಡ. ಗುರಿ ಸಿಕ್ಕಿದ ತಕ್ಷಣ ಈ ಡ್ರೋನ್ ಅದರ ಮೇಲೆ ದಾಳಿ ನಡೆಸಿ ಪುನಃ ತನ್ನನ್ನು ಧ್ವಂಸ ಮಾಡಿಕೊಳ್ಳುತ್ತದೆ.