ಮುಸಲ್ಮಾನರು ಮಸೀದಿಯನ್ನು ಹಾಗೂ ಕ್ರೈಸ್ತರು ಚರ್ಚ್ ನಡೆಸುತ್ತಾರೆ; ಹಾಗಾದರೆ ಹಿಂದೂಗಳಿಗೆ ದೇವಾಲಯ ನಡೆಸುವ ಅಧಿಕಾರ ಏಕಿಲ್ಲ? – ಭಾಜಪದ ಕೇರಳ ರಾಜ್ಯದ ಅಧ್ಯಕ್ಷ ಕೆ. ಸುರೇಂದ್ರನ್

ಸುರೇಂದ್ರನ್‌ರವರು ಇಷ್ಟು ಹೇಳಿ ಸುಮ್ಮನಾಗದೆ, ಕೇಂದ್ರದಲ್ಲಿ ಆಢಳಿತದಲ್ಲಿರುವ ಭಾಜಪ ಸರಕಾರವು ದೇವಾಲಯಗಳನ್ನು ಸರಕಾರೀಕರಣದ ಕಪಿಮುಷ್ಟಿಯಿಂದ ಮುಕ್ತಗೊಳಿಸಲು ಕ್ರಮಕೈಗೊಳ್ಳಬೇಕೆಂಬ ಬೇಡಿಕೆಯನ್ನು ಎತ್ತಿಹಿಡಿಯುವುದು ಅಗತ್ಯ !

ಕೆ. ಸುರೇಂದ್ರನ್‌

ತ್ರಿಶೂರ್ (ಕೇರಳ) : ಕೇರಳದಲ್ಲಿ ಮಸೀದಿಗಳ ಮೇಲೆ ಮುಸಲ್ಮಾನರ ಹಾಗೂ ಚರ್ಚ್‌ನ ಮೇಲೆ ಕ್ರೈಸ್ತರ ಅಧಿಕಾರವಿದೆ. ಆದರೆ ಹಿಂದೂಗಳಿಗೆ ಮಾತ್ರ ಅನ್ಯ ಮತದವರಂತೆ ಅಧಿಕಾರ ಸಿಗುವುದಿಲ್ಲ. ಕೇರಳದಲ್ಲಿ ಹಿಂದೂಗಳಿಗೆ ದೇವಾಲಯವನ್ನು ನಡೆಸಲು ಅಧಿಕಾರ ಏಕಿಲ್ಲ?, ಎಂದು ಭಾಜಪದ ಪ್ರದೇಶಾಧ್ಯಕ್ಷರಾದ ಕೆ. ಸುರೇಂದ್ರನ್‌ರವರು ತ್ರಿಶೂರಿನ ಭಾಜಪ ಜಿಲ್ಲಾ ಸಮಿತಿ ಸಭೆಯ ಉದ್ಘಾಟನೆಯ ಸಮಯದಲ್ಲಿ ಪ್ರಶ್ನಿಸಿದರು.

ಸುರೇಂದ್ರನ್‌ರವರು ಮುಂದೆ ಶಬರಿಮಲೈನ ಧಾರ್ಮಿಕ ವಿಧಿಗಳು ಏನೇನಿರಬೇಕೆಂಬ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಕೇರಳ ಸರಕಾರವು ನ್ಯಾಯಾಲಯಕ್ಕೆ ನೀಡಿದೆ. ಬಹುಸಂಖ್ಯಾತ ಸಮುದಾಯದ ಮೇಲೆ ಹೇರಲಾಗುತ್ತಿರುವ ಜಾತ್ಯತೀತತೆಯು ಬೇರೆ ಮತದವರಿಗೋಸ್ಕರ ಇಲ್ಲ. ಆಡಳಿತ ಪಕ್ಷಗಳಾದ ಮಾರ್ಕ್ಸ್‌ವಾದಿ ಹಾಗೂ ಕಾಂಗ್ರೆಸ್ ಎರಡೂ ರಾಜಕೀಯ ಮುಖಂಡರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡವರಂತೆ ನಡೆದುಕೊಳ್ಳುತ್ತಾರೆ ಎಂದು ನುಡಿದರು.