ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಇವರು ಪ್ರತಿಭಟನಾಕಾರರನ್ನು ‘ನಾಯಿಗಳು’ ಎಂದು ಕರೆದಿದ್ದಾರೆ !

ಥಳಿಸಿ ಒದ್ದೋಡಿಸುವ ಬೆದರಿಕೆ !

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ! ಇಂತಹ ನಾಯಕರು ತಮ್ಮನ್ನು ತಾವು ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳುತ್ತಾ ಹಿಂದುತ್ವನಿಷ್ಠರನ್ನು ಟೀಕಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಒಂದು ಸಭೆಯಲ್ಲಿ ಪ್ರತಿಭಟನೆ ಮಾಡಿ ನಿವೇದನೆ ಕೊಡುವವರನ್ನು ‘ನಾಯಿಗಳು’ ಎಂದು ಕರೆದಿದ್ದಾರೆ. ಅದಕ್ಕೆ ‘ಚಂದ್ರಶೇಖರ್ ರಾವ್ ಇವರು’ ಕ್ಷಮೆಯಾಚಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ.

. ಚಂದ್ರಶೇಖರ್ ರಾವ್ ಅವರು ರಾಜ್ಯದ ನಲಗೊಂಡ ಜಿಲ್ಲೆಯ ನಾಗಾರ್ಜುನ ಸಾಗರಕ್ಕೆ ಒಂದು ಪ್ರಾಜೆಕ್ಟ್‌ನ ಭೂಮಿಪೂಜೆಗಾಗಿ ಹೋಗಿದ್ದರು. ಆ ಸಮಯದಲ್ಲಿ, ‘ದಲಿತ ಶಕ್ತಿ’ ಎಂಬ ಸಂಘಟನೆಯ ಕಾರ್ಯಕರ್ತರು ರಾವ್ ಅವರಿಗೆ ನಿವೇದನೆಯನ್ನು ನೀಡಲು ಪ್ರಯತ್ನಿಸುತ್ತಿದ್ದರು. ಆ ಸಮಯದಲ್ಲಿ ಅವರು ಘೋಷಣೆಗಳನ್ನು ಕೂಗುತ್ತಿದ್ದರು. ಅವನ ಕೈಯಲ್ಲಿ ಒಂದು ಬೋರ್ಡ್ ಕೂಡ ಇತ್ತು. ಆಗ ಅಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.

. ಇದನ್ನು ನೋಡಿದ ಚಂದ್ರಶೇಖರ್ ರಾವ್ ಇವರು, ‘ನಿವೇದನೆ ನೀಡ ಬಯಸುವವರು ಅದನ್ನು ನೀಡಿ ಮತ್ತು ನನ್ನ ಭಾಷಣವನ್ನು ಸದ್ದಿಲ್ಲದೆ ಆಲಿಸಿ. ನನ್ನ ಭಾಷಣವನ್ನು ಕೇಳಬಯಸದವರು ಇಲ್ಲಿಂದ ಹೊರಡಿ. ಇಲ್ಲಿ ಹುಚ್ಚಾಟವಾಡಬೇಡಿ, ಇಲ್ಲದಿದ್ದರೆ ನಿಮ್ಮನ್ನು ಶಿಕ್ಷಿಸಬೇಕಾಗಬಹುದು. ಪೊಲೀಸರು ಕೂಡಲೇ ಇವರನ್ನು ಇಲ್ಲಿಂದ ಹೊರಹಾಕಿ. ಉಳಿದವರು ಅವರನ್ನು ನಿರ್ಲಕ್ಷಿಸಿ. ಇಂತಹ ಅನೇಕ ನಾಟಕಗಳನ್ನು ನಾನು ನೋಡಿದ್ದೇನೆ. ನಿಮ್ಮಂತಹ ಅನೇಕ ನಾಯಿಗಳನ್ನೂ ನಾನು ನೋಡಿದ್ದೇನೆ. ನೀವು ಬೆರಳೆಣಿಕೆಯಷ್ಟು ಮಾತ್ರ. ನಾವು ಪ್ರತಿಕ್ರಿಯಿಸಿದರೆ, ನೀವು ಪುಡಿಪುಡಿಯಾಗುತ್ತೀರಿ. ನಿಮ್ಮ ಮೂರ್ಖತನದಿಂದಾಗಿ ಇಲ್ಲಿ ಯಾವುದೇ ಸಮಸ್ಯೆ ಇರಲಾರದು. ಇಲ್ಲಿಂದ ಹೊರಡಿ, ಅಥವಾ ನಿಮ್ಮನ್ನು ಥಳಿಸಬೇಕಾಗುತ್ತದೆ. “