ಪಾಕಿಸ್ತಾನದ ಹಿಂದೂ ದೇವಾಲಯಗಳ ಸ್ಥಿತಿ ಬಹಳ ಕರುಣಾಜನಕವಾಗಿದೆ!

ಪಾಕ್ ಸರ್ವೋಚ್ಚ ನ್ಯಾಯಾಲಯ ಸ್ಥಾಪಿಸಿದ ಆಯೋಗದ ವರದಿ

ಭಾರತದಲ್ಲಿ ಜಾತ್ಯತೀತವಾದಿಗಳು, ಪ್ರಗತಿ (ಅಧೋಗತಿ)ಪರರು ಈ ಬಗ್ಗೆ ಎಂದಿಗೂ ಬಾಯಿ ತೆರೆಯುವುದಿಲ್ಲ; ಆದರೆ, ಭಾರತದ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳಿಗೆ ಕಲ್ಲು ಎಸೆಯಲಾಗಿದೆ ಎಂಬ ವದಂತಿಗಳು ಹರಡಿದರೂ, ಹಿಂದೂಗಳನ್ನು ತಕ್ಷಣವೇ ‘ತಾಲಿಬಾನಿ’, ‘ಅಸಹಿಷ್ಣು’ ಎಂದು ಘೋಷಿಸಿ ಕೈ ತೊಳೆದುಕೊಳ್ಳುತ್ತಾರೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಅಲ್ಪಸಂಖ್ಯಾತ ಹಿಂದೂಗಳ ದುಃಸ್ಥಿತಿ ಮತ್ತು ಪಾಕಿಸ್ತಾನದಲ್ಲಿರುವ ಅವರ ಧಾರ್ಮಿಕ ಸ್ಥಳಗಳ ಬಗ್ಗೆ ೭ ನೇ ವರದಿಯನ್ನು ಡಾ. ಶೋಯೆಬ್ ಸಡಲ್ ಆಯೋಗವು ಪಾಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಹಿಂದೂಗಳ ಧಾರ್ಮಿಕ ಸ್ಥಳಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ವರದಿ ಹೇಳಿದೆ. ಈ ಆಯೋಗದಲ್ಲಿ ಡಾ. ರಮೇಶ ವಂಕವಾನಿ, ಸಕೀಬ್ ಜಿಲಾನಿ ಮತ್ತು ಪಾಕಿಸ್ತಾನದ ಅಟಾರ್ನಿ ಜನರಲ್ ಮೂವರು ಸಹಾಯಕ ಸದಸ್ಯರು ಇದ್ದಾರೆ. ಆಯೋಗವು ಜನವರಿ ೬ ರಂದು ಚಕವಾಲ್‌ನಲ್ಲಿರುವ ಕಟಾಸ್ ರಾಜ್ ದೇವಸ್ಥಾನ ಮತ್ತು ಜನವರಿ ೭ ರಂದು ಮುಲ್ತಾನ್‌ನಲ್ಲಿರುವ ಪ್ರಲ್ಹಾದ್ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಈ ದೇವಾಲಯಗಳ ದಯನೀಯ ಸ್ಥಿತಿಯ ಛಾಯಾಚಿತ್ರಗಳನ್ನು ಈ ವರದಿಯಲ್ಲಿ ನೀಡಲಾಗಿದೆ.

ಮುಲ್ತಾನ್‌ನಲ್ಲಿರುವ ಪ್ರಲ್ಹಾದ್ ದೇವಸ್ಥಾನ

 

ಚಕವಾಲ್‌ನಲ್ಲಿರುವ ಕಟಾಸ್ ರಾಜ್ ದೇವಸ್ಥಾನ