‘ನಾನೂ ಹಿಂದೂ (ಅಂತೆ) !’

ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ತನಗಾಗುತ್ತಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ್ದಾರೆ

‘ನಾನು ಹಿಂದೂ’ ಎಂದು ಕೇವಲ ಬಾಯಿಮಾತಿಗೆ ಹೇಳಿದಾಕ್ಷಣ ಯಾರೂ ಹಿಂದೂ ಆಗುವುದಿಲ್ಲ, ಆದರೆ ಕರ್ಮಗಳಿಂದ ಹಿಂದೂ ಆಗುವುದು ಮಹತ್ವದ್ದಾಗಿದೆ. ಹಿಂದೂ ಬಹುಸಂಖ್ಯಾತರಿರುವ ಭಾರತವನ್ನು ಮೀನಾ ಹ್ಯಾರಿಸ್ ಇಲ್ಲಿಯವರೆಗೆ ಟೀಕಿಸಿದ್ದಾರೆ ಮತ್ತು ಯಾವತ್ತೂ ಹಿಂದೂ ಧರ್ಮವನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡಿಲ್ಲ ಎಂಬುದು ಸತ್ಯ!

ಮೀನಾ ಹ್ಯಾರಿಸ್

ವಾಷಿಂಗ್ಟನ್ (ಅಮೇರಿಕಾ) – ನಾನು ಹಿಂದೂ. ಫ್ಯಾಸಿಸಂ ಅನ್ನು ಮರೆಮಾಚಲು ಧರ್ಮವನ್ನು ಬಳಸುವುದನ್ನು ನಿಲ್ಲಿಸಿ. ಮಾಂಸ ತಿಂದಿದ್ದಕ್ಕೆ ಮತ್ತು ಯಾವಾಗಲೋ ಒಮ್ಮೆ ಜೀಸಸ್ ಎಂದು ಪೋಸ್ಟ್‌ನಲ್ಲಿ ಬರೆದಿದ್ದಕ್ಕೆ ನನ್ನನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಎಳೆಯುತ್ತಿದ್ದೀರಿ. ನೀವು ಹತಾಶರಾಗಿದ್ದೀರಿ ಎಂದು ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ. ಅವರು ಸಂಕ್ರಾಂತ್ ಸಾಹು ಎಂಬ ಧರ್ಮಪ್ರೇಮಿಯ ಟ್ವೀಟ್‌ಗೆ ಉತ್ತರಿಸುವಾಗ ಈ ಹೇಳಿಕೆ ನೀಡಿದ್ದಾರೆ. ರೈತರ ಸಂಘಟನೆಗಳನ್ನು ಬೆಂಬಲಿಸಿ ಮೀನಾ ಹ್ಯಾರಿಸ್ ಮೊದಲ ಬಾರಿಗೆ ಟ್ವೀಟ್ ಮಾಡಿದ್ದಾರೆ. ಇದನ್ನು ಟೀಕಿಸಿದ ಸಾಹು, ನಿಮ್ಮ ಹಿಂದೂದ್ವೇಷವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಹಿಂದೂಗಳನ್ನು ದ್ವೇಷಿಸುತ್ತೀರಿ; ಏಕೆಂದರೆ ಅವರು ನಿಮ್ಮನ್ನು ವಿರೋಧಿಸುತ್ತಾರೆ’, ಎಂದು ಟ್ವೀಟ್ ನಲ್ಲಿ ಹೇಳಿದ್ದರು.