ರಾಮನ ದೇಶದಲ್ಲಿ ಪೆಟ್ರೋಲ್ ದುಬಾರಿ, ಸೀತೆ ಹಾಗೂ ರಾವಣನ ದೇಶಗಳಲ್ಲಿ ಅಗ್ಗ ! – ಡಾ. ಸುಬ್ರಮಣ್ಯನ್ ಸ್ವಾಮಿ

ನವದೆಹಲಿ – ರಾಮನ ಭಾರತದಲ್ಲಿ ಪೆಟ್ರೋಲಿನ ದರ ಲೀಟರ್‌ಗೆ ೯೩ ರೂಪಾಯಿ, ಸೀತೆಯ ನೇಪಾಳದಲ್ಲಿ ಪೆಟ್ರೋಲಿನ ದರ ಲೀಟರ್‌ಗೆ ೫೩ ರೂಪಾಯಿ ಹಾಗೂ ರಾವಣನ ಲಂಕೆಯಲ್ಲಿ ಪೆಟ್ರೋಲಿನ ದರ ಲೀಟರ್‌ಗೆ ೫೧ ರೂಪಾಯಿ ಇದೆ ಎಂದು ಭಾಜಪ ಹಿರಿಯ ನಾಯಕ ಹಾಗೂ ಸಾಂಸದ ಡಾ. ಸುಬ್ರಮಣ್ಯನ್ ಸ್ವಾಮಿ ಇವರು ವಾರ್ಷಿಕ ಬಜೆಟ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಹಿಂದೆಯೂ ಅವರು ಪೆಟ್ರೋಲ್‌ ಡೀಸೆಲ್ ದರಗಳ ಬಗ್ಗೆ ಕೇಂದ್ರ ಸರಕಾರವನ್ನು ಟೀಕಿಸಿದ್ದರು.