ಸ್ವಾತಂತ್ರ್ಯದ ಘೋಷಣೆ ಅಂದರೆ ಯುದ್ಧ ಎಂಬರ್ಥ (ಅಂತೆ) – ತೈವಾನ್‌ಗೆ ಚೀನಾದ ಬೆದರಿಕೆ

ಚೀನಾಕ್ಕೆ ತನ್ನ ನೆರೆಹೊರೆಯಲ್ಲಿರುವ ೨೪ ದೇಶಗಳ ಜೊತೆಗೆ ಗಡಿವಿವಾದವಿದೆ, ಮತ್ತು ಇದರಿಂದ ಅದರ ವಿಸ್ತಾರವಾದದ ಮಹತ್ವಾಕಾಂಕ್ಷೆಯು ಸ್ಪಷ್ಟವಾಗಿದೆ. ಈಗ ಎಲ್ಲ ದೇಶಗಳು ಚೀನಾದ ವಿರುದ್ಧ ಒಟ್ಟಾಗಿ ಅದಕ್ಕೆ ಪಾಠ ಕಲಿಸುವ ಆವಶ್ಯಕತೆಯಿದೆ!

ಬೀಜಿಂಗ್ (ಚೀನಾ) – ತೈವಾನ ಈಗ ಸ್ವಾತಂತ್ರ್ಯದ ಘೋಷಣೆಯನ್ನು ಮಾಡಲು ಸಿದ್ಧವಾಗುತ್ತಿದೆ ಎಂಬ ವಾರ್ತೆಯ ಹಿನ್ನೆಲೆಯಲ್ಲಿ ಚೀನಾವು ಯುದ್ಧದ ಬೆದರಿಕೆಯನ್ನು ಹಾಕಿದೆ. ಚೀನಾ ತೈವಾನ ತನ್ನ ಪ್ರದೇಶ (ಭೂಭಾಗ) ಎಂದು ಹೇಳುತ್ತದೆ.

ಚೀನಾದ ಸಂರಕ್ಷಣ ಸಚಿವಾಲಯದ ವಕ್ತಾರ ವೂ ಕಿಯಾನ ಇವರು, ‘ತೈವಾನನಲ್ಲಿರುವ ಬೆರಳೆಣಿಯಷ್ಟು ಜನರು ಸ್ವಾತಂತ್ರ್ಯದ ಬೇಡಿಕೆಯನ್ನು ಮಾಡುತ್ತಿದ್ದಾರೆ.

(ಸೌಜನ್ಯ :South China Morning Post)

ನಾವು ಸ್ವಾತಂತ್ರ್ಯದ ಬೇಡಿಕೆಯನ್ನು ಮಾಡುವ ಈ ಜನರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ, ಬೆಂಕಿಯೊಂದಿಗೆ ಆಟವಾಡಿದರೆ ಕೈಸುಟ್ಟಿಕೊಳ್ಳುವುದು ಖಚಿತ. ತೈವಾನನ ಸ್ವಾತಂತ್ರ್ಯದ ಬೇಡಿಕೆಯ ಅಂದಾರೆ ಯುದ್ಧದ ಕರೆಯೇ’ ಎಂದಿದ್ದಾರೆ.