ಆಪತ್ಕಾಲದಲ್ಲಿ ಉಪಯುಕ್ತವಾಗಲಿರುವ ಸೌರ ವಿದ್ಯುತ್ತಿನ ವ್ಯವಸ್ಥೆಯ ಫಲನಿಷ್ಪತ್ತಿಯನ್ನು ಹೆಚ್ಚಿಸುವುದಕ್ಕಾಗಿ ಕಡಿಮೆ ವಿದ್ಯುತ್ ಬಳಸುವ ನೂತನ ಉಪಕರಣಗಳನ್ನು ಬಳಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇವರಲ್ಲಿ ಸವಿನಯ ವಿನಂತಿ !

‘ಮುಂಬರುವ ಆಪತ್ಕಾಲದಲ್ಲಿ ಆಹಾರ-ಧಾನ್ಯ, ನೀರು ಮತ್ತು ವಿದ್ಯುತ್‌ಗಳಂತಹ ಜೀವನಾವಶ್ಯಕ ವಸ್ತುಗಳ ಕೊರತೆಯಾಗುವ ಸಾಧ್ಯತೆ ಇದೆ. ಆ ಸಮಯಕ್ಕೆ ವಿದ್ಯುತ್ ಪೂರೈಕೆ ಕಡಿತವಾದರೆ ಪರ್ಯಾಯ ವ್ಯವಸ್ಥೆ ಎಂದು ಸಾಧಕರು ಸೌರವಿದ್ಯುತ್ ವ್ಯವಸ್ಥೆಯನ್ನು ಅಳವಡಿಸುತ್ತಿದ್ದಾರೆ. ‘ಸೌರವಿದ್ಯುತ್ ಮೂಲಕ ದೊರಕುವ ವಿದ್ಯುತ್ತು ಯೋಗ್ಯ ರೀತಿಯಲ್ಲಿ ಬಳಕೆಯಾಗಲು’, ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.

ಈ ಮೊದಲು ಉಪಯೋಗಿಸಲಾಗುತ್ತಿದ್ದ ಸಾಮಾನ್ಯ ದೀಪಗಳಿಂದ ಹಿಡಿದು ಎಲ್ಲ ರೀತಿಯ ವಿದ್ಯುತ್ ಉಪಕರಣಗಳ ನಿರ್ಮಾಣದಲ್ಲಿ ದಿನೆ ದಿನೆ ಬಹಳಷ್ಟು ಸುಧಾರಣೆಗಳಾಗಿವೆ ಮತ್ತು ಇನ್ನೂ ಕೂಡ ಆಗುತ್ತಿವೆ, ಉದಾ. ಹಿಂದೆ ಕೆಂಪು/(ಹಳದಿ) ಬೆಳಕನ್ನು ನೀಡುವ ದೀಪಗಳ ಜಾಗದಲ್ಲಿ ಬಿಳಿ ಬಣ್ಣದ ಬೆಳಕು ನೀಡುವ ‘ಸಿ.ಎಫ್.ಎಲ್’ನ (CFL) ನ ದೀಪಗಳು ಬಂದಿವೆ. ಅನಂತರ ಈಗ ಹೊಸದಾಗಿ ‘ಎಲ್‌ಈಡಿ’ಯ(LED) ದೀಪಗಳು ಬಂದಿವೆ. ಈ ದೀಪಗಳು ಹಿಂದಿನ ದೀಪಗಳ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ವಿದ್ಯುತ್ ಬಳಸುತ್ತವೆ.

ಇದೇ ರೀತಿ ಪಂಖಾ, ತಂಪುಪೆಟ್ಟಿಗೆ, ‘ಕೂಲರ್’ (ತಂಪು ನೀಡುವ ಯಂತ್ರಗಳು), ಬಟ್ಟೆ ಒಗೆಯುವ ಯಂತ್ರ, ಏರ್ ಕಂಡೀಶನರ್ ಯಂತ್ರ ಇತ್ಯಾದಿ ವಿವಿಧ ಯಂತ್ರಗಳನ್ನು ನಿರ್ಮಿಸುವ ಕಂಪನಿಗಳು ಅದರಲ್ಲಿ ಸತತವಾಗಿ ಸುಧಾರಣೆ ಮಾಡಿ ಕಡಿಮೆ ವಿದ್ಯುತ್ ಬಳಕೆ ಮಾಡುವಂತಹ ಯಂತ್ರಗಳನ್ನು ನಿರ್ಮಿಸಲು ಆದ್ಯತೆ ನೀಡುತ್ತಿವೆ.

ಈ ಅಂಶಗಳನ್ನು ಗಮನದಲ್ಲಿಟ್ಟು ಹೊಸ ಉಪಕರಣಗಳನ್ನು ಖರೀದಿಸುವಾಗ ಕಡಿಮೆ ವಿದ್ಯುತ್ ಬಳಕೆಯಾಗುವ ಉಪಕರಣಗಳನ್ನು ಖರೀದಿಸಲು ಆದ್ಯತೆ ನೀಡಬೇಕು. ಆರ್ಥಿಕದೃಷ್ಟಿಯಿಂದ ಸಾಧ್ಯವಿದ್ದರೆ ಹಳೆಯ ಉಪಕರಣಗಳನ್ನು ಬದಲಾಯಿಸಿ ಹೊಸ ಉಪಕರಣಗಳನ್ನು ತೆಗೆದುಕೊಳ್ಳಬಹುದು. ಅದರಿಂದ ಸೌರವಿದ್ಯುತ್ ಮೂಲಕ ದೊರಕುವ ವಿದ್ಯುತ್‌ನ ಬಳಕೆ ಕಡಿಮೆಯಾಗುವುದರಿಂದ ಆಪತ್ಕಾಲದ ಪರಿಸ್ಥಿತಿಯಲ್ಲಿಯೂ ವಿದ್ಯುತ್ ಉಪಕರಣಗಳ ಬಳಕೆಯನ್ನು ಸುಗಮವಾಗಿ ಮಾಡಲು ಸಾಧ್ಯವಾಗುತ್ತದೆ.